ಸಚಿವ ಸಂಪುಟ ಪುನ:ರಚನೆಯಲ್ಲಿ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
Demand to give Yashwantha Raya Gowda a ministerial berth in the cabinet reshuffle
ಲೋಕದರ್ಶನ ವರದಿ
ತಾಂಬಾ 04: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಕರ್ನಾಟಕದ ಗಡಿನಾಡು ವಿಜಯಪುರ ಜಿಲ್ಲೆಯ ಹೈಪ್ರೊಫೈಲ್ ಕ್ಷೇತ್ರವಾದ ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೆ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ಇಡೀ ಕ್ಷೇತ್ರದ ಜನರನ್ನು ಕಾಡುತ್ತಿರುವ ದೊಡ್ಡ ಬೇಸರ. ಇಂಡಿ ಕ್ಷೇತ್ರದಲ್ಲಿ ಬರೊಬ್ಬರಿ 15 ಬಾರಿ ಚುನಾವಣೆಗಳು ನಡೆದಿವೆ. 7 ಮಂದಿ ಶಾಸಕರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ, ಇವರಲ್ಲಿ ಒಬ್ಬರಿಗೂ ಇದುವರೆಗೆ ಮಂತ್ರಿಯಾಗುವ ಯೋಗ ಕೂಡಿಬಂದಿಲ್ಲ!
ಈಗ ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ದೊಡ್ಡ ಸುದ್ದಿ ಏನೆಂದರೆ ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಪುನ:ರಚನೆಯಲ್ಲಿ ಇಂಡಿ ಕ್ಷೇತ್ರದ ಹ್ಯಾಟ್ರಿಕ್ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ? ಕ್ಷೇತ್ರದ ಶಾಪ ವಿಮೋಚನೆಯಾಗಲಿದೆಯೇ? ಎಂಬ ಚರ್ಚೆ ಈ ಕ್ಷೇತ್ರದಲ್ಲಿ ಜೋರಾಗಿ ನಡೀತಿದೆ. 3 ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಯಶವಂತರಾಯಗೌಡ ಇಂಡಿ ಕ್ಷೇತ್ರದ ಇತಿಹಾಸದಲ್ಲಿ ಮಲ್ಲಪ್ಪ ಕರಬಸಪ್ಪ ಸುರಪುರ, ಆರ್.ಆರ್. ಕಲ್ಲೂರ, ರವಿಕಾಂತ ಪಾಟೀಲ ತಲಾ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಪ್ರಸ್ತುತ ಕಾಂಗ್ರೆಸ್ ಶಾಸಕರಾಗಿರುವ ಯಶವಂತರಾಯಗೌಡ ಪಾಟೀಲ ಅವರು 2013, 2018 ಮತ್ತು 2023 ರಲ್ಲಿ ಸತತ ಮೂರು ಬಾರಿ ಭರ್ಜರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸಿದ್ದಾರೆ.
ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಾತು: ಇಂಡಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ನನಗೆ 3 ಬಾರಿ ಹ್ಯಾಟ್ರಿಕ್ ಗೆಲುವು ನೀಡಿದ್ದಾರೆ. ಸಚಿವ ಸ್ಥಾನ ನೀಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯ. ಈ ಬಾರಿ ಸಚಿವ ಸ್ಥಾನ ನೀಡುತ್ತಾರೆಂಬ ವಿಶ್ವಾಸ ನನಗಿದೆ. ಇತಿಹಾಸದ ಪುಟಗಳಲ್ಲಿ 'ಸಚಿವ ಸ್ಥಾನ' ಸಿಗದ ನೋವು! 1957 ರಿಂದ ಈವರೆಗೆ ಇಂಡಿ ಕ್ಷೇತ್ರದ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ ಬರೀ ನಿರಾಸೆಯೇ ಎದ್ದು ಕಾಣುತ್ತದೆ. 1957 ್ಘ 1978: ಮಲ್ಲಪ್ಪ ಕರಬಸಪ್ಪ ಸುರಪುರ ಅವರು ಶಾಸಕರಾಗಿದ್ದರೂ ಮಂತ್ರಿ ಸ್ಥಾನ ಸಿಗಲಿಲ್ಲ.
1962: ರೇವಣಸಿದ್ದಪ್ಪ ರಾಮಗೊಂಡಪ್ಪ ಕಲ್ಲೂರ (ಆರ್.ಆರ್. ಕಲ್ಲೂರ) ಅವರು ಗೆದ್ದರೂ ಮಂತ್ರಿ ಭಾಗ್ಯ ದೊರೆಯಲಿಲ್ಲ. ರವಿಕಾಂತ ಪಾಟೀಲ ಪಕ್ಷೇತರರಾಗಿ ಸ್ಪರ್ಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದರೂ ಇವರಿಗೆ ಮಂತ್ರಿ ಪದವಿ ಒಲಿ ಯಲಿಲ್ಲ. ಡಾ. ಸಾರ್ವಭೌಮ ಬಗಲಿ 2008 ರಲ್ಲಿ ಬಿಜೆಪಿಯಿಂದ ಗೆದ್ದರೂ ಸಚಿವರಾಗಲು ಸಾಧ್ಯವಾಗಲಿಲ್ಲ. ಜಿಲ್ಲೆಯ ಉಳಿದ 8 ಕ್ಷೇತ್ರಗಳಾದ ಬಬಲೇಶ್ವರ (ಎಂ.ಬಿ.ಪಾಟೀಲ), ಬಸವನಬಾಗೇವಾಡಿ (ಬಿ.ಎಸ್.ಪಾಟೀಲ ಮನಗೂಳಿ, ಶಿವಾನಂದ ಪಾಟೀಲ), ಸಿಂದಗಿ (ಎಂ.ಸಿ. ಮನಗೂಳಿ), ಮುದ್ದೇಬಿಹಾಳ (ಸಿ.ಎಸ್. ನಾಡಗೌಡ) ಸೇರಿದಂತೆ ಎಲ್ಲ ಕಡೆ ಶಾಸಕರು ಮಂತ್ರಿಗಳಾಗಿದ್ದಾರೆ. ಆದರೆ ಇಂಡಿ ಕ್ಷೇತ್ರಕ್ಕೆ ಮಾತ್ರ ಈ ಭಾಗ್ಯ ಸಿಕ್ಕಿಲ್ಲ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 