ಹೂವಿನ ಹಡಗಲಿ

ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿದ ಪ್ರತೇಕ ಮೈಲಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯ

ವಿಧಾನ ಸಭೆಯಲ್ಲಿ ಪ್ರತಿಧ್ವನಿಸಿದ  ಪ್ರತೇಕ ಮೈಲಾರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯ


ಲೋಕದರ್ಶನ ವರದಿ 

ಹೂವಿನಹಡಗಲಿ 12:   ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿರುವ ಮೈಲಾರ ದೇವರಗುಡ್ಡ ಜಂಟಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಾನೂನು ತೊಡಕುಗಳು ಅಡ್ಡಿಯಾಗಿವೆ. ದೇವರಗುಡ್ಡ ಕೈಬಿಟ್ಟು ಪ್ರತ್ಯೇಕ ಮೈಲಾರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಶಾಸಕ ಎಲ್‌.ಕೃಷ್ಣನಾಯ್ಕ ಒತ್ತಾಯಿಸಿದ್ದಾರೆ.ಕೃಷ್ಣನಾಯ್ಕ,’ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಅಂತರ್ ಜಿಲ್ಲೆಯ ದೇವರಗುಡ್ಡ ಸೇರೆ​‍್ಡಯಿಂದ ಪ್ರಾಧಿಕಾರ ರಚನೆಗೆ ಅಡ್ಡಿಯಾಗಿದೆ. ವಂಶಪಾರಂಪರ್ಯ ಧರ್ಮಕರ್ತರ ಹಕ್ಕು ಮೊಟಕುಗೊಳಿಸದಂತೆ ಪ್ರಾಧಿಕಾರ ರಚಿಸುವುದು ಅಗತ್ಯವಿದೆ. ವಾರ್ಷಿಕ ಜಾತ್ರೆಯಲ್ಲಿ 8-10 ಲಕ್ಷ ಜನರು ಪಾಲ್ಗೊಳ್ಳುತ್ತಾರೆ. ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಉತ್ತಮ ರಸ್ತೆಗಳಿಲ್ಲ, ವಾಹನ ಪಾರ್ಕಿಂಗ್ ಗೆ ಜಾಗ ಇಲ್ಲ, ಸ್ನಾನ ಘಟ್ಟ ಇಲ್ಲ, ಹರಕೆ ತೀರಿಸುವ ಭಕ್ತರಿಗೆ ಸೌಕರ್ಯಗಳಿಲ್ಲ’ ಎಂದು ಸದನದ ಗಮನ ಸೆಳೆದರು.ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಉತ್ತರಿಸಿ, ಪ್ರಾಧಿಕಾರ ರಚನೆಗೆ ಸರ್ಕಾರಿ ಆದೇಶವಾಗಿದೆ. ಸದನದ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಯ ಕುರಿತು ಗಮನಹರಿಸುವೆ’ ಎಂದು ಹೇಳಿದ್ದಾರೆ. 


ಸುದ್ದಿ ಓದಿ