ಕಡಲೆ ಬೀಜ ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೆ ಹಣವನ್ನ ಸರಿಯಾಗಿ ಪಾವತಿಸದ ದಾವಣಗೆರೆ ಮೂಲದ ಕಂಪನಿಯು ಮಹಿಳೆಯರಿಗೆ ವಂಚಿಸಿದೆ : ನವಲಗುಂದ

Davangere-based company cheated women by not paying farmers who sold chickpea seeds and maize: Navl

ಕಡಲೆ ಬೀಜ ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೆ ಹಣವನ್ನ ಸರಿಯಾಗಿ ಪಾವತಿಸದ ದಾವಣಗೆರೆ ಮೂಲದ ಕಂಪನಿಯು ಮಹಿಳೆಯರಿಗೆ ವಂಚಿಸಿದೆ : ನವಲಗುಂದ

ಗದಗ 28: ಪ್ರತಿ ಗ್ರಾಮದಲ್ಲಿ 5 ಜನ ಕೃಷಿ ಸಕಿಯರನ್ನ ಆಯ್ಕೆ ಮಾಡಿ ಅವರಿಂದ ಕಡಲೆ,ಮೆಕ್ಕೆಜೋಳ ಖರೀದಿ ಮಾಡುವ ವಿಧಾನವು ಎಪಿಎಂ ಹಾಗೂ ಟಿಪಿಎಂ ಗಳ ಮುಖಾಂತರ ನಡೆಯುತ್ತ ಬಂದಿರುತ್ತದೆ. ಇವರಿಂದ 3 ತಿಂಗಳಲ್ಲಿ ಬರೋಬ್ಬರಿ  27 ಕೋಟಿ ರೂ.ಗಳ ಹಣದ ವ್ಯವಹಾರ ನಡೆದಿರುತ್ತದೆ. ಆದರೆ ಕಡಲೆ ಬೀಜ ಮೆಕ್ಕೆಜೋಳ ಮಾರಾಟ ಮಾಡಿದ ರೈತರಿಗೆ ಹಣವನ್ನ ಸರಿಯಾಗಿ ಪಾವತಿಸದ ದಾವಣಗೆರೆ ಮೂಲದ ಕಂಪನಿಯು ಮಹಿಳೆಯರಿಗೆ ವಂಚಿಸಿದೆ ಎಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಡಿ ಎಚ್ ನವಲಗುಂದ ತಿಳಿಸಿದರು.                    

                       ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗದಗ ಮುಂಡರಗಿ ತಾಲೂಕಿನಲ್ಲಿ  ಕಡಲೆ, ಮೆಕ್ಕೆಜೋಳ ಬೆಳೆದ ಒಟ್ಟು 450 ಜನ ರೈತರಿಗೆ ಅನ್ಯಾಯವಾಗಿದ್ದು, 6 ಕೋಟಿ 52 ಲಕ್ಷ ರೂ.ಗಳು ಬಾಕಿ ಹಣ ಬರಬೇಕಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕೃಷಿ ಇಲಾಖೆ ಸಂಜೀವಿನಿ ಯೋಜನೆಯಡಿ ಖರೀದಿ ಕೇಂದ್ರವನ್ನ ಜಿಲ್ಲಾ ಪಂಚಾಯತ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್ ಆರ್ ಎಲ್ ಎಂ) ಅಡಿ ಗ್ರಾಮೀಣ ಭಾಗದಲ್ಲಿ ಸ್ಥಾಪಿತವಾಗಿರುವ ಈ ಸಂಸ್ಥೆಯಿಂದ ಮೋಸವಾಗಿರುವುದಾಗಿ, ಜನವರಿ-05 ರ ಒಳಗಾಗಿ ಇದಕ್ಕೆ ಪರಿಹಾರ ನೀಡದೇ ಹೋದಲ್ಲಿ  ಜನವರಿ-06 ರಂದು ಗದಗ ಜಿಲ್ಲಾಡಳಿತ ಭವನದ ಮುಂದೆ 3 ದಿನಗಳ ಕಾಲ ಮಹಾ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ನಂತರ ರಾಜ್ಯ ಹೆದ್ದಾರಿಗಳನ್ನ ಬಂದ್ ಮಾಡುವುದಾಗಿ  ತಿಳಿಸಿರುತ್ತಾರೆ.    ಪತ್ರಿಕಾ ಗೋಷ್ಠಿ ವೇಳೆ ಮಹಾದೇವಿ ಹುಯಿಲಗೋಳ,ಬಿಬಿಜಾನ್ ಸಂಕೇಶ್ವರ, ಜಂಗ್ಲಿಸಾಬ ಕಿಂದರಿ, ಶ್ಯಾಮಲಾ, ಮೌನೇಶ್ವರಿ ನರಗುಂದ,ಲಕ್ಷ್ಮೀ ನಾಶಿಪುಡಿ, ಶಿವಲೀಲಾ ಭರದವಾಡ, ಶಹನಾಜ್ ನದಾಫ,ಸರಸ್ವತಿ ಬೆಟಗೇರಿ, ಸರಸ್ವತಿ ದಾಸರ ಸೇರಿದಂತೆ ಇತರರು ಭಾಗಿಯಾಗಿದ್ದರು.