ರಾಜವಾಳ ಬಳಿ ಮೊಸಳೆ ಪ್ರತ್ಯಕ್ಷ: ಆತಂಕಗೊಂಡ ಗ್ರಾಮಸ್ಥರು
ಲೋಕದರ್ಶನ ವರದಿ
ಹೂವಿನಹಡಗಲಿ ಫೆ.23: ತುಂಗಭದ್ರಾ ನದಿಯ ತಟದಲ್ಲಿರುವ ಗ್ರಾಮವೊಂದರಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಗ್ರಾಮಸ್ಥರು ಆತಂಕಗೊಂಡ ಘಟನೆ ತಾಲೂಕಿನ ರಾಜವಾಳ ಗ್ರಾಮದಲ್ಲಿ ಸುದ್ದಿಯಾಗಿದೆ.
ಗ್ರಾಮದಲ್ಲಿ ಬೃಹತ್ ಆಕಾರದ ಮೊಸಳೆ ನದಿ ತೀರದ ಗದ್ದೆಯಲ್ಲಿ ಪ್ರತ್ಯಕ್ಷವಾಗಿದೆ. ಇದುವರೆಗೆ ಮೊಸಳೆಯಿಂದ ಯಾರಿಗೆ ಯಾವುದೇ ಜೀವಕ್ಕೆ ತೊಂದರೆ ನೀಡಿಲ್ಲವಾದರೂ, ಮೊಸಳೆ ಏನಾದರೂ ಮಾಡಬಹುದು ಎನ್ನುವ ಆತಂಕದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಹಿಡಿದು ಮತ್ತೆ ತುಂಗಭದ್ರಾ ನದಿಯಲ್ಲಿ ಬಿಟ್ಟಿದ್ದಾರೆ. ಇದೀಗ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.