ಬಂಡಾಯದ ಪ್ರಭಾವಿತರಾಗಿದ ಮಾಕ್ರ್ಸ್ವಾದಿ ಚಿಂತಕ ಕಾಮ್ರೇಡ್ ನಿತ್ಯಾನಂದ ಸ್ವಾಮಿ - ಸತೀಶ್ ಕುಲಕರ್ಣಿ
Comrade Nityananda Swami, a Marxist thinker influenced by the rebellion - Satish Kulkarni
ಹಾವೇರಿ 03 : ನವಲಗುಂದ - ನರಗುಂದ ರೈತ ಬಂಡಾಯದ ಪ್ರಭಾವಿತರಾಗಿದ ಮಾಕ್ರ್ಸ್ವಾದಿ ಚಿಂತಕರಾದ ಕಾಮ್ರೇಡ್ ನಿತ್ಯಾನಂದ ಸ್ವಾಮಿ ಅವರು ದುಡಿಯುವ ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ತಾಗ್ಮಯಿ ಎಂದು ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದ ಕಾಮ್ರೇಡ್ ನಿತ್ಯಾನಂದ ಸ್ವಾಮಿಯವರಿಗೆ ನಗರದ ಪರೀವೀಕ್ಷಣಾ ಮಂದಿರದಲ್ಲಿ ಸೋಮವಾರ ಎಸ್‌ಎಫ್‌ಐ, ಡಿವೈಎಫ್‌ಐ ಹಾಗೂ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜಿಸಿದ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವದತ್ತಿಯ ಜ್ಞಾನಕಿರಣ ಆಶ್ರಮದ ಮಠದಲ್ಲಿದ ನಿತ್ಯಾನಂದ ಸ್ವಾಮೀಜಿಗಳು ನನಗೆ ಒಡನಾಟದ ಸಂಗಾತಿ ಆಗಿದ್ದರು.
ಅವರು ಕಾವಿಯಲ್ಲಿರುವ ಕಾಲದಿಂದಲೂ ನೋಡಿದ್ದೇನೆ. 1980 ಫೆಬ್ರವರಿ 18 ರಂದು ದೇವದಾಸಿ ಅನಿಷ್ಟ ಪದ್ಧತಿ ವಿರೋಧಿಸಿ ಬಹುದೊಡ್ಡ ಪ್ರತಿರೋಧದ ಹೋರಾಟ ನಡೆದಿತ್ತು.ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಭೇಟಿ ಮಾಡಿದರು. ಯಲ್ಲಮ್ಮನ ಗುಡ್ಡದಲ್ಲಿ ದೇವದಾಸಿ ಪದ್ಧತಿ ವಿರುದ್ಧದ ಹೋರಾಟದ ಜೊತೆಗೆ ನಿತ್ಯಾನಂದ ಸ್ವಾಮಿಗಳು ನಿಂತ್ತು ನಮ್ಮಗೆಲ್ಲ ಧೈರ್ಯ ವಿಶ್ವಾಸವನ್ನು ತುಂಬಿದರು. ಕಾಮ್ರೇಡ್ ಸ್ವಾಮಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದ್ದಾರೆ. ನರಗುಂದ ನವಲಗುಂದ ರೈತ ಬಂಡಾಯ ಚಳುವಳಿ ಪರಿಣಾಮದಿಂದ ಕಾವಿ ಕಳಚಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಎಂದೂ ಉದ್ವಿಗ್ನ ಗೊಳುತ್ತಿರಲ್ಲಿಲ್ಲ ತಾಳ್ಮೆಯಿಂದ ಹೋರಾಟಗಳನ್ನು ರೂಪಿಸುತ್ತಿದ್ದರು ಆನಿಟ್ಟಿನಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಹಾವೇರಿಯಲ್ಲಿ ಎಸ್‌ಎಫ್‌ಐ ವಿದ್ಯಾರ್ಥಿ ಚಳುವಳಿಗೆ ಕಾರ್ಯಕರ್ತರನ್ನು ಬೆಳೆಸಿದರು. ನಿತ್ಯಾನಂದ ಸ್ವಾಮಿ ಮಾದರಿಯಾಗಿದರು. ಹೃದಯಾಂತರ ಭಾವದಿಂದ ಸದಾಕಾಲವೂ ಸ್ಮರಣೆಯಲ್ಲಿರುತ್ತಾರೆ ಎಂದರು.ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸಮಾಜದಲ್ಲಿ ನೊಂದ ಹಾಗೂ ಶೋಷಿತ ಜನರ ಏಳಿಗೆಗಾಗಿ ಜೀವಮಾನವೀಡೀ ಅವಿರತವಾಗಿ ಶ್ರಮಿಸಿದ್ದ ಕಾಮ್ರೇಡ್ ನಿತ್ಯಾನಂದ ಸ್ವಾಮಿಗಳು ಧರ್ಮ ಪ್ರಚಾರಕರಾಗಿದ್ದ ಅವರಿಗೆ ರೈತ ಬಂಡಾಯ ಪ್ರಭಾವದಿಂದಾಗಿ ಕಾವಿ ತೆಗೆದು ಬೆಳಗಾವಿಯ ರಾಮದುರ್ಗ ದಿಂದ ಚಳುವಳಿ ಜೀವನ ಪ್ರಾರಂಭಿಸಿದ ಅವರು ಹುಬ್ಬಳ್ಳಿ, ಹಾನಗಲ್, ಹಾವೇರಿ, ರಾಣೇಬೆನ್ನೂರ, ಹರಿಹರ ಸೇರಿದಂತೆ ರಾಜ್ಯದ ವಿವಿಧ ಕಡೆಯಲ್ಲಿ ಜನ ಚಳುವಳಿ ರೂಪಿಸಿದ ಅವರು ಮಾಕ್ರ್ಸ್ವಾದಿ ಚಿಂತಕರಾಗಿದ್ದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘಟನೆ (ಂಋಘಗ), ಸರಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ-ಕಾಲೇಜು ಹೊರಗುತ್ತಿಗೆ ನೌಕರರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಸಿಪಿಐ(ಎಂ) ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಮಾಜಿ ಕಾರ್ಯದರ್ಶಿ ಮಂಡಳಿ ಸದಸ್ಯರೂ ಆಗಿ ನಾಯಕತ್ವ ನೀಡಿದರು. ಅವರು ಸಮಾಜ ಸೇವೆ ಮಾಡಲಿಲ್ಲ ಸಮಾಜದಲ್ಲಿ ಅಸಮಾಧಾನ ತೊಲಗಿಸಿ ಬದಲಾವಣೆಯ ಸಮಾನತೆಯ ನಾಡಿಗಾಗಿ ದುಡಿದರು. ಸಾಕಷ್ಟು ತ್ಯಾಗದ ಗುಣಗಳನ್ನು ಹೊಂದಿದರು ಚಳುವಳಿಗಾಗಿ ಕುಟುಂಬವನ್ನೇ ತೊರೆದ ಅವರು ಚಳುವಳಿಯ ಒಡನಾಡಿಗಳೇ ಕುಟುಂಬಸ್ಥರೆಂದು ನಂಬಿದ್ದರು ಎಂದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್, ಹಿರಿಯ ಕಾರ್ಮಿಕ ಮುಖಂಡ ಹೊನ್ನಪ್ಪ ಮರೆಮ್ಮನವರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಬಸಪ್ಪ ಗೋವಿ, ಸಿಪಿಐಎಂ ಪಕ್ಷದ ಹಿರಿಯ ಮುಖಂಡ ರುದ್ರ್ಪ ಜಾಬೀನ, ಬಿಎಸ್.ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಕಬುಲ್, ಪಿ.ಯು ಕಾಲೇಜು ಉಪನ್ಯಾಸಕರ ಸಂಘಟನೆ ಮುಖಂಡ ಅಶೋಕ ಕಹಾರ, ವಕೀಲರಾದ ನಾರಾಯಣ ಕಾಳೆ, ಡಿವೈಎಫ್‌ಐ ಮುಖಂಡರಾದ ರೇಣುಕಾ ಕಹಾರ, ಖಲಂದರ್ ಅಲ್ಲಿಗೌಡ್ರ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘಟನೆಯ ಮುಖಂಡರಾದ ಶಿವರಾಜ ಹಿತ್ಲರ್, ಶೋಭಾ ಡೊಳ್ಳೇಶ್ವರ ಅವರು ನುಡಿ ನಮನ ಸಲ್ಲಿಸಿದರು.
ಕಾಮ್ರೇಡ್ ನಿತ್ಯಾನಂದ ಸ್ವಾಮೀಯವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಿ, ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಗಾತಿಗಳು ವಿಮೋಚನಾ ಗೀತೆ ಹಾಡಿದರು.ಹಾಸ್ಟೆಲ್ ನೌಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್.ಎಚ್ ನದಾಪ್, ಗುರುನಾಥಸಿಂಗ್ ಕಹಾರ, ಎಸ್‌ಎಫ್‌ಐ-ಡಿವೈಎಫ್‌ಐ ಹಾಗೂ ಬಾಲ ಸಂಘಂ ಮುಖಂಡರಾದ ಅರುಣ ನಾಗಾವತ್, ನಿಂಗರಾಜ ಪೂಜಾರ, ಧನುಷ್ ದೊಡ್ಮನಿ, ಅನ್ವಿಕಾ ಆರಿ್ಬ, ಖುಷಿ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 