ಐನಾಪೂರ ಪಟ್ಟಣದ ಕೆಆರ್‌ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
Centenary celebration of KR Educational Institution of Ainapur town
ಐನಾಪೂರ ಪಟ್ಟಣದ ಕೆಆರ್‌ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮ
ಕಾಗವಾಡ 30 : ಪ್ರತಿಯೊಬ್ಬರು ಸ್ವಾವಲಂಬನೆಯಿಂದ ಬದುಕಬೇಕಾದರೇ ಶಿಕ್ಷಣ ಹಾಗೂ ಸಂಸ್ಕಾರ ಅತೀ ಮುಖ್ಯವಾಗಿದೆ. ಮಕ್ಕಳು ಯಶಸ್ಸಿನ ಉತ್ತುಂಗಕ್ಕೆ ಏರಬೇಕಾದರೆ ಗಡಿಯಾರದ ಮುಳ್ಳಿನ ಹಾಗೆ ಸತತ ಪ್ರಯತ್ನವಿರಬೇಕೆಂದು ಹುಬ್ಬಳ್ಳಿಯ ಖ್ಯಾತ ಚಿಕ್ಕಮಕ್ಕಳ ಹಾಗೂ ಕಿಡ್ನಿ ತಜ್ಞೆ ಡಾ. ಸೀತಾ ಮುತಾಲಿಕ ಹೇಳಿದರು. ಅವರು ಬುಧವಾರ ದಿ. 29 ರಂದು ಐನಾಪೂರ ಪಟ್ಟಣದ ಕೆಆರ್‌ಈ ಶಿಕ್ಷಣ ಸಂಸ್ಥೆಯ ಶತಮಾನೋತ್ಸದ ಸಂಭ್ರಮದ ಅಂಗ ಸಂಸ್ಥೆಗಳ ಮಹಾಸಂಗಮದ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ, ಮಾತನಾಡುತ್ತಿದ್ದರು. ನಾನು ಇದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವದು ಹೆಮ್ಮೆ ಎನಿಸುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವ, ರಾಮಾಯಣ, ಮಹಾಭಾರತದಂತಹ ಧಾರ್ಮಿಕ ಜ್ಞಾನದ ಅವಶ್ಯಕತೆ ಇದ್ದು, ದೇಶಭಕ್ತರ ಹಾಗೂ ಉನ್ನತ ಸಾಧನೆಗೈದ ಮಹಾಪುರುಷರ ಬಗ್ಗೆ ಶಿಕ್ಷಕರು ಜ್ಞಾನಾರ್ಜನೆ ನೀಡಬೇಕೆಂದರು. ಇನ್ನೋರ್ವ ಅತಿಥಿ, ಸಂಸ್ಥೆಯ ವಿದ್ಯಾರ್ಥಿ ಕೆಎಲ್‌ಇ ಸಂಸ್ಥೆಯ ಖ್ಯಾತ ಎಲುಬು ಕೀಲುಗಳ ಮತ್ತು ನರರೋಗ ತಜ್ಞ ಡಾ. ಆನಂದಕುಮಾರ ಖಟಾಂವಿ ಮಾತನಾಡಿ, ಜೀವನದಲ್ಲಿ ಯಾವುದೇ ಉನ್ನತ ಸ್ಥಾನ ಅಲಂಕರಿಸಬೇಕಾದರೆ ನಿರ್ದಿಷ್ಠವಾದ ಗುರಿ ಹೊಂದಿರಬೇಕು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಮಕ್ಕಳು ಪರಿಶ್ರಮ ವಹಿಸದರೆ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ಎಂದರು. ಪ.ಪಂ. ಅಧ್ಯಕ್ಷೆ ಸರೋಜನಿ ಸುರೇಶ ಗಾಣಿಗೇರ ಮಕ್ಕಳಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ಉಪಾಧ್ಯಕ್ಷ ಸಂಜಯ ಭಿರಡಿ ಮಾತನಾಡಿದರು. ಈ ವೇಳೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಕಾರ್ಚಿ, ಮೋಹನರಾ ಮುತಾಲಿಕ, ರಾಜೇಂದ್ರ ಪೋದ್ರಾರ, ಪ್ರವೀಣ ಗಾಣಿಗೇರ, ಸಂತೋಷ ಪಾಟೀಲ, ಸುರೇಶ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಪ್ರವೀಣ ಕುಲಕರ್ಣಿ, ಉದಯ ನಿಡಗುಂದಿ ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 