ರಾಜ್ಯೋತ್ಸವ ಪ್ರಶಸ್ತಿಗೆ ಕಲಾವಿದ ಸಂಗಮೇಶ ಆಯ್ಕೆ
ಜಮಖಂಡಿ 01:ತಾಲೂಕಾಡಳಿತ ಹಾಗೂ ಕನ್ನಡ ಸಂಘ ಜಂಟಿಯಾಗಿ ಕೊಡಮಾಡುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಕವಟಗಿ ಗ್ರಾಮದ ಖ್ಯಾತ ನಾಟಕಕಾರ ಸಂಗಮೇಶ ರಾಮಪ್ಪ ಗುರವ ಆಯ್ಕೆಯಾಗಿದ್ದಾರೆಂದು ಆಯ್ಕೆ ಸಮಿತಿ ಅಧ್ಯಕ್ಷ ಬಿಇಒ,ಸಿ.ಎಂ.ನ್ಯಾಮಗೌಡ ತಿಳಿಸಿದ್ದಾರೆ.
ನಾಟಕ ಹಾಗೂ ಚಿತ್ರರಂಗದ ಮೂಲಕ ಕನ್ನಡ ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಆಯ್ಕೆ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ನಗರದ ಹೊಕ್ಕಳಬಾವಿ ಮೈದಾನದಲ್ಲಿ ನ.1 ರಂದು ಬೆಳಿಗ್ಗೆ 7.30 ಕ್ಕೆ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ ಪ್ರಮಾಣಪತ್ರ ಹಾಗೂ ನಗದು ಹಣ ಒಳಗೊಂಡಿದೆಂದು ತಿಳಿಸಿದ್ದಾರೆ.