ಕಾರವಾರದಲ್ಲಿ ಮತ್ತೊಂದು ಆಲಿವ್ ರಿಡ್ಲಿ ಆಮೆ ಸಾವು
Another Olive Ridley turtle dies in Karwar
ಕಾರವಾರ, ಆ.19: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಆಲಿವ್ ರಿಡ್ಲಿ ಜಾತಿಯ ಕಡಲಾಮೆಯ ಕಳೆಬರಹ ಪತ್ತೆಯಾಗಿದೆ. ಈ ವರ್ಷ ಮೃತಪಟ್ಟ ಎರಡನೇ ಆಲಿವ್ ರಿಡ್ಲಿ ಕಡಲಾಮೆ ಇದಾಗಿದೆ. ಅರಬ್ಬಿ ಸಮುದ್ರದ ಕಾರವಾರದಿಂದ ಹರವಾದ ಕಡಲತೀರದವರೆಗೆ ಆಲಿವ್ ರಿಡ್ಲಿ ಜಾತಿಯ ಆಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ ನಗರದ ವಾರ್ಶಿಪ್ ಚಾಪೆಲ್ ಮ್ಯೂಸಿಯಂ ಬಳಿಯ ಕಡಲತೀರದಲ್ಲಿ ಕಡಲಾಮೆಯ ಕಳೆಬರಹ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಹಾಗೂ ಮೆರೈನ್ ಎಸ್ಪಿಎಫ್‌ಎಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿದರು.
ಕಡಲಾಮೆ ಕೆಲವು ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆಯಿದ್ದು, ದೇಹ ಕೊಳೆತಿದ್ದರಿಂದ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಬಳಿಕ ಅಧಿಕಾರಿಗಳ ಸಮ್ಮುಖದಲ್ಲೇ ಕಡಲತೀರದಲ್ಲಿಯೇ ಆಮೆಯನ್ನು ಹೂಳಲಾಯಿತು. ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಬಲೆಗಳಿಗೆ ಸಿಲುಕಿ ಅಥವಾ ಯಾಂತ್ರಿಕ ಬೋಟ್ಗೆ ಡಿಕ್ಕಿಯಾಗಿ ಆಮೆ ಮೃತಪಟ್ಟಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 