ಬಂಜಾರಾ ಸಂಸ್ಕೃತಿ ಕಾರ್ಯಾಗಾರಕ್ಕೆ ಚಾಲನೆ

ಬಂಜಾರಾ ಸಂಸ್ಕೃತಿ ಕಾರ್ಯಾಗಾರಕ್ಕೆ ಚಾಲನೆ  Banjara Culture Workshop Inaugurated

ಲೋಕದರ್ಶನ ವರದಿ 

  ವಿಜಯಪುರ  21:: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಬಂಜಾರಾ ಸಾಂಸ್ಕೃತಿಕ ಭಾಷಾ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಬಂಜಾರಾ ಯುವಕ-ಯುವತಿಯರಿಗಾಗಿ ಮೂರು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಗಸ್ಟ್‌ 23ರಿಂದ 25ರವರೆಗೆ ಬಾಗಲಕೋಟೆ ನಗರದ ಡಾ. ಬಾಬು ಜಗಜೀವನರಾಮ ಭವನದಲ್ಲಿ ಆಯೋಜಿಸಲಾಗಿದೆ.  

ಕಾರ್ಯಾಗಾರದಲ್ಲಿ ಬಂಜಾರಾ ಸಮುದಾಯದ ಹವೇಲಿ, ವಳಂಗ, ವಿತಿ, ಕಸಳಾತ್, ಸಿಕ್ವಾಡಿ, ಡಾವಲೋ, ಹೋಳಿ ಹಾಡುಗಳು, ವಾಂಜಣ, ಮೇರಾ ಗೀತೆ, ವದಾವೋ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲೆಗಳ ಕುರಿತು ತರಬೇತಿ ನೀಡಲಾಗುತ್ತದೆ.  

ಬಂಜಾರಾ ಸಂಸ್ಕೃತಿ ಮತ್ತು ಭಾಷೆಯ ಉಳಿವಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ತಾಂಡಾಗಳ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಮೋತಿಲಾಲ್ ರೂ. ಚವಾಣ್ ಹಾಗೂ ಸದಸ್ಯ ಸಂಚಾಲಕ ಆರಿ​‍್ಬ. ನಾಯಕ್ ಮನವಿ ಮಾಡಿದ್ದಾರೆ.  

ತರಬೇತಿ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರು ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸದಸ್ಯ ಸಂಚಾಲಕ ಆರಿ​‍್ಬ. ನಾಯಕ್ ಅವರನ್ನು 9900451688 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.