ಸಾರ್ಥಕ ಜೀವನಕ್ಕೆ ಕ್ರಿಯಾಶೀಲ ಬದುಕು ಇಂದಿನ ಅಗತ್ಯ- ಡಾ. ಕಾಂತೇಶರೆಡ್ಡಿ

ಸಾರ್ಥಕ ಜೀವನಕ್ಕೆ ಕ್ರಿಯಾಶೀಲ  ಬದುಕು ಇಂದಿನ ಅಗತ್ಯ- ಡಾ. ಕಾಂತೇಶರೆಡ್ಡಿ   Active living is the need of the hour for a meaningful life - Dr. Kanteshareddy

ರಾಣೆಬೆನ್ನೂರು 8: ಶಿವಶರಣರ ವಚನಗಳು ಬದುಕನ್ನ ರೂಪಿಸುವ ದಿಕ್ಸೂಚಿಗಳು, ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ಹಂತವನ್ನು ಸರಿದಾರಿಗೆ ತರಲು ಶರಣರ ವಚನಗಳು ದಾರೀದೀಪವಾಗಿವೆ ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು. ಅವರು ರವಿವಾರ ಇಲ್ಲಿನ        ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕಸಾಪ,ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ, ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕ ಅಧ್ಯಕ್ಷ,ಶರಣ ಸಾ. ಪ.ಗೌರವಾಧ್ಯಕ್ಷ  ವಾಸಪ್ಪ ಯಲ್ಲಪ್ಪ ಕುಸಗೂರ ಅವರ 85ನೇ ವರ್ಷದ ಜನ್ಮ ದಿನಾಚರಣೆಯ ಅಭಿನಂದನಾ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯಕ್ಕೆ  ಶಿವ ಶರಣೆಯರ ಕೊಡುಗೆ ವಿಷಯ ಕುರಿತು   ಉಪನ್ಯಾಸ ನೀಡಿ ಮಾತನಾಡಿದರು.  

 12ನೇ ಶತಮಾನದಲ್ಲಿ  35ಕ್ಕೂ ಹೆಚ್ಚು ವಚನಕಾರ್ತಿಯರು ವಚನಗಳನ್ನು ರಚನೆ ಮಾಡುವ ಮೂಲಕ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದರು. ಆಚಾರ-ವಿಚಾರ ನಡೆ-ನುಡಿ ಒಂದಾಗಿಸಿಕೊಂಡು ಬದುಕನ್ನು ಕಟ್ಟಿಕೊಂಡಾಗ ಮಾನವ ಜನ್ಮ ಶ್ರೇಷ್ಠವಾಗುತ್ತದೆ ಎಂಬ ಶರಣರ ನುಡಿಗಳು ಇಂದಿಗೂ ಕೂಡ ಜೀವನಕ್ಕೆ ದಾರೀದೀಪವಾಗಿವೆ ಎಂದರು.        ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉನ್ನತಿ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಬಸವರಾಜ್  ಪಾಟೀಲ್  ವಾಸಣ್ಣ ಅವರು ರಾಣೇಬೆನ್ನೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ನಿರ್ಮಾಣ ಮಾಡುವಲ್ಲಿ ಹೆಚ್ಚು ಶ್ರಮವಹಿಸಿದ್ದಾರೆ ಅವರ ಅವಿರತ ಪ್ರಯತ್ನದಿಂದ ತಾಲೂಕಿನ ಎಲ್ಲರ ಸಹಕಾರ ಪಡೆದು ಈ ಭವನವನ್ನು ನಿರ್ಮಿಸಿದ್ದು ಇಂದು ಸಾಹಿತ್ಯ ಚಟುವಟಿಕೆಗಳಿಗೆ ದಾರೀದೀಪವಾಗಿದೆ ಎಂದರು.  

   ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಇಂತಹ ಇಳಿವಯಸ್ಸಿನಲ್ಲಿಯೂ ಸಾಹಿತ್ಯದ ಅಭಿಮಾನವನ್ನು ಇಟ್ಟುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿರುವ ವಾಸಣ್ಣ ಅವರಿಗೆ ಅಭಿನಂದನೆಗಳು ಎಂದರು.  ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷಮಾರುತಿ ಶಿಡ್ಲಾಪುರ ಅವರು ಮಾತನಾಡಿ ಶರಣರ ಚಿಂತನೆಗಳು ಇಂದಿಗೂ ಕೂಡ ಜೀವಂತವಾಗಿರುವುದು ವಾಸಣ್ಣ ಕುಸಗೂರ ಅವರಂತ ಶರಣರಿಂದ ಎಂದರು. ಕಸಾಪ ಅಧ್ಯಕ್ಷ   ಪ್ರಭಾಕರ್ ಎನ್ ಶಿಗ್ಲಿ, ಶ.ಸಾ.ಪ ಅಧ್ಯಕ್ಷ  ರಾಜೇಶ್ವರಿ ಪಾಟೀಲ್, ಉಪನ್ಯಾಸಕಿ  ಕಸ್ತೂರಮ್ಮ ಪಾಟೀಲ್, ವರ್ತಕ  ಗದಿಗೆಪ್ಪ ಹೊಟ್ಟಿಗೌಡರ, ಶರಣೆ ಗಾಯತ್ರಮ್ಮ ಕುರುವತ್ತಿ, ನಂದಾ ಕುಸಗೊರ, ಎ.ಬಿ. ರತ್ನಮ್ಮ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಭಾಗವಹಿಸಿದ್ದರು ತಾಲೂಕಿನ ಹಲವಾರು ಸಾಹಿತ್ಯಾಭಿಮಾನಿಗಳು, ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು ,ವಾಸಪ್ಪ ಕುಸಗೂರ ಅವರಿಗೆ ಅಭಿನಂದಿಸಿ,ಸನ್ಮಾನಿಸಿ, ದೀರ್ಘಾಯುಷ್ಯ ಜೀವನ ಕರುಣಿಸಲೆಂದು ಪ್ರಾರ್ಥಿಸಿದರು. ಎಸ್‌. ಹೆಚ್‌. ಪಾಟೀಲ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಜಗದೀಶ್ ಮಳಿಮಠ ನಿರೂಪಿಸಿ, ವಂದಿಸಿದರು.