ನ.1ರಂದು ಬೃಹತ್ ಮಟ್ಟದ ಕಾರ್ಯಕ್ರಮ
ಲೋಕದರ್ಶನ ವರದಿ
ಜಮಖಂಡಿ 31:ಕನ್ನಡ ನಾಡು, ನುಡಿ, ಭಾಷೆಯನ್ನು ಉಳಿಸಿ, ಬೆಳಸುವದಕ್ಕೆ ನ.1ರಂದು ಕೋಟಿ ಕಂಠ ಗಾಯನ, ನಾಡಗೀತೆ, ಭರತನಾಟ್ಯಗಳು ಹಾಗೂ ಜಮಖಂಡಿಗೆ ಕನ್ನಡದ ಕೊಡುಗೆಗಳ ಬಗ್ಗೆ ಇಂದಿನ ಯುವಕರಿಗೆ ತಿಳಿಸುವ ಉದ್ದೇಶದಿಂದ ಬೃಹತ್ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಉತ್ಸವ ಸಮಿತಿ ಅಧ್ಯಕ್ಷ ಹಣಮಂತರಾಯ ಬಿರಾದರ ತಿಳಿಸಿದ್ದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನ,1 ರಂದು ಕನ್ನಡ ನಾಡಿನ ಕುರಿತು ಭರತನಾಟ್ಯ, ಭಾವಗೀತೆಗಳು, ಚಲಚಿತ್ರಗೀತೆಗಳು, ನಾಡಗೀತೆಗಳನ್ನು ಹಾಡುವ ಮೂಲಕ ಕನ್ನಡ ಅಭಿಮಾನವನ್ನು ಗಟ್ಟಿಯಾಗಿ ಉಳಿಸುವುದು. ಬೀಗ್ ಬಾಸ್ ದಿ.ಪ್ರಥಮ ಅವರು ಆಗಮಿಸಲಿದ್ದಾರೆ. ಅಂದು ನಗರದ ಯವ ಕಲಾ ಪ್ರತಿಭೆಗಳಿಗೆ ಅವಕಾಶವನ್ನು ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಕನ್ನಡ ಅಭಿಮಾನಿಗಳು ಸೇರಲಿದ್ದಾರೆ. ನಗರದ ಎಸ್ಆರ್ಎ ಕ್ಲಬ್ ಎದ್ದುರಿಗೆ ಸಾಯಂಕಾಲ 7 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು. ಶಾಸಕರು, ಮಾಜಿ ಶಾಸಕರು, ಶ್ರೀಗಳು, ಗಣ್ಯ ಮಾನ್ಯರುಗಳು ಭಾಗಿಯಾಗಲ್ಲಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಕನ್ನಡ ಕವಿಗಳ ಕುರಿತು ವಾಕ್ಯಗಳನ್ನು ಬಳಸಿ. ಕನ್ನಡದ ಜಾಗೃತಿ ಮೂಡಿಸಲು ಪ್ರತಿ ಮನೆ,ಮನೆಗಳ ಬಾಗಿಲಿಗೆ ಸ್ಟೀಕರ್ಗಳನ್ನು ಅಂಟಿಸಲಾಗುತ್ತದೆ, ಒಂದು ಸ್ಟೀಕರ್ ಬೆಲೆ 20 ರೂ, ಇರುತ್ತದೆ. ಪ್ರತಿಯೊಬ್ಬ ಕನ್ನಡದ ಅಭಿಮಾನಿಗಳು ನೀಡಿ.ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ವಿಠ್ಠಲ ಪರೀಟ, ಈರಯ್ಯ ಕಲ್ಲೋಳಿ, ಮಂಜುನಾಥ ಜಕ್ಕಪ್ಪನ್ನವರ, ಶಶಿ ಜಗದಾಳ, ಪ್ರಜ್ವಲ ಪರಂಜಪೆ, ಸುನೀಲ ಭೂವಿ ಸೇರಿದಂತೆ ಅನೇಕರು ಇದ್ದರು.