ಗದಗದಲ್ಲಿ 14, 15 ರಂದು ಅಂಬಿಗರ ಚೌಡಯ್ಯ 905ನೇ ಜಯಂತ್ಯೋತ್ಸವ
ಗದಗ 03: ಅಂಬಿಗರ ಶರಣ ಸಂಸ್ಕೃತಿ ಉತ್ಸವ ವಚನ ಗ್ರಂಥ ಮಹಾ ರಥೋತ್ಸವ ಜನವರಿ-14 ಮತ್ತು 15 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರ ಅಂಚೆ ಕಂಚಾರಗಟ್ಟಿ ನಡಯಲಿದ್ದು, ಈ ಕಾರ್ಯಕ್ರಮಕ್ಕೆ ರಾಜ್ಯದ ಗಂಗಾಮತ ಸಮುದಾಯದ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಅಂಬಿಗರ ಸೇವಾ ಟ್ರಸ್ಘ ಗದಗ ಜಿಲ್ಲಾ ಗೌರವ ಅಧ್ಯಕ್ಷ ಬಿ ಎನ್ ಯರನಾಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗಂಗಾಮತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರೆ್ಡ ಮಾಡುವಂತೆ ಸರಕಾರಕ್ಕೆಆಗ್ರಹಿಸುವುದಾಗಿ ಹೇಳಿದರು.ಜನವರಿ-14 ರ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯ ಮಂಟಪ ಪೂಜೆ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ,ವಚನ ಕಂಠಪಾಠ ಸ್ಪರ್ಧೆ,ಪ್ರಥಮ ಐತಿಹಾಸಿಕ ಗಂಗಾರತಿ, ಸಾಂಸ್ಕೃತಿಕ ಕಾರ್ಯಕ್ರಮ, ಅಂಬಿಗರ ಚೌಡಯ್ಯ ಜೀವನಾಧಾರಿತ ದೃಶ್ಯಾವಳಿ ಪ್ರದರ್ಶನ ಜರುಗಲಿದೆ.
ಜನವರಿ-15 ರಂದು ಬೆಳಿಗ್ಗೆ ಧರ್ಮಧ್ವಜಾ ರೋಹಣ, ಧರ್ಮಸಭೆ, ನಿಜಶರಣ ಚೌಡಯ್ಯನವರ 905ನೇ ಜಯಂತ್ಯೋತ್ಸವ, ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ವಚನ ಗ್ರಂಥ ಮಹಾ ರತೋತ್ಸವಜರುಗುವುದಾಗಿ ಬಿ ಎನ್ ಯರನಾಳ ತಿಳಿಸಿದರು.
ಪತ್ರಿಕಾ ಗೋಷ್ಠಿ ಸಂದರ್ಭದಲ್ಲಿ ಕಾಶಪ್ಪ ದುರಗಪ್ಪನವರ, ಗುರ್ಪತಿರ್ಲಾಪುರ, ಹರೀಶ ಬಾರಕೇರ, ಸಂಗಮೇಶ ಹಾದಿಮನಿ, ಕಾಶಪ್ಪ ಬಳಗಾನೂರ, ಅಮಿತ ಪೂಜಾರ, ಅಶೋಕ ಶಿಗ್ಲಿ, ಚಂದ್ರಶೇಖರ ಅಂಬಿಗೇರ, ರವಿಕುಮಾರ, ಶಿವಾನಂದ ಬನಹಟ್ಟಿ ಸೇರಿದಂತೆ ಇತರರು ಇದ್ದರು.