ಹೂವಿನ ಹಡಗಲಿ

ಮಕ್ಕಳಿಗಾಗಿ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ”:ಶಾಸಕ ಕೃಷ್ಣನಾಯಕ

ಮಕ್ಕಳಿಗಾಗಿ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ”:ಶಾಸಕ ಕೃಷ್ಣನಾಯಕ

ಹೂವಿನಹಡಗಲಿ   7:   ಮಕ್ಕಳು ಶಿಕ್ಷಣದಿಂದ  ಹಿಂದುಳಿಯ ಬಾರದು  ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಿ,ಎಂದು ಶಾಸಕ ಕೃಷ್ಣನಾಯಕ ಹೇಳಿದರು.ತಾಲ್ಲೂಕಿನ ಮಿರಾಕೊರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರ ಎಸ್‌.ಎಸ್‌.ಎಲ್‌.ಸಿ.ವಿದ್ಯಾರ್ಥಿಗಳ  ಬೀಳ್ಕೊಡುಗೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.  ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಆಗ ಮಕ್ಕಳು ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ಆಸ್ತಿಯಾಗುತ್ತಾರೆ  ಎಂದ ಅವರು ವಸತಿ ಶಾಲೆಯ ಮಕ್ಕಳು ಉತ್ತಮ ಪ್ರತಿಭಾವಂತ ರಿದ್ದುಕಲಿಕಾ ಆಸಕ್ತಿ ಮತ್ತು ಶಿಸ್ತನ್ನು ಅಳವಡಿಸಿ ಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸ ಕ ಸೊಪ್ಪಿನ ಪ್ರಭು ಮಾತನಾಡಿ ಪರೀಕ್ಷೆ ಸಂದರ್ಭದಲ್ಲಿ ಮಕ್ಕಳಿಗೆ ಮೊಬೈಲ್ ಕೊಡದೇ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಿ ಎಂದರು.ಕಳೆದ ಬಾರಿ ಎಸ್‌.ಎಸ.ಎಲ್‌.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ  ಟಿ.ಸ್ನೇಹ ಹಾಗೂ ಸಿರಿ ಕನ್ನಡ ಪ್ರತಿಭಾ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ. ಬಾಲ್ಯವಿವಾಹ ಪದ್ದತಿ ಬಗ್ಗೆ  ಜಾಗೃತಿ ,ಸಾಂಸ್ಕೃತಿಕ ಕಾರ್ಯಕ್ರಮ ಗಳು ಗಮನ ಸೆಳೆಯಿತು. ಪಂಚಾಯತ್ ಅದ್ಯಕ್ಷೆ ಶಾಂತಕುಮಾರಿ ಅದ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಾರದಗೌಸಮೊಹಿದ್ದೀನ್, ಪುತೇಶ, ಸದಸ್ಯೆ ವೀಣಾ ಮತ್ತು ಭೀಮಪ್ಪ,ಪತ್ರಕರ್ತ ಎಂ.ಅಶೋಕ, ವಸತಿ ಶಾಲೆ ಪ್ರಾಚಾರ್ಯ ಶ್ರೀಧರ. ಶಿಕ್ಷಕರಾದ ವಿದ್ಯೆ, ಶಿವ ಜ್ಯೋತಿ, ಪ್ರಕಾಶ ನಾಯ್ಕ,ತೇಜುನಾಯ್ಕ, ಧರ್ಮೇಂದ್ರ, ಲಿಂಗೇಗೌಡ, ಶಿವಶಂಕರ, ಜಯಶ್ರೀ, ರೇಣುಕಾ, ರಾಜೇಶ್ವರಿ, ಬುಡೇನಾ, ಗೋಪಿನಾಯ್ಕ ಇದ್ದರು. 


ಸುದ್ದಿ ಓದಿ