ಪಂಪಾಪತಿ ಇಂಗಳಗಿಗೆ ಗಾನಕೋಗಿಲೆ ಪ್ರಶಸ್ತಿ
'Gana Kogile' Award for Pampapathi Ingalagi
ಲೋಕದರ್ಶನ ವರದಿ
ಗಂಗಾವತಿ 29: ಪರಿಸರ ಸೇವಾ ಟ್ರಸ್ಟ್ ಹಾಗು ಹಿರೇಬೆಣಕಲ್ ಮೊರೇರ ಸಾಂಸ್ಕೃತಿಕ ಪ್ರತಿಷ್ಠಾನ ಗಂಗಾವತಿ ಸಹಯೋಗದೊಂದಿಗೆ ನಗರದ ಐಎಂಎ ಹಾಲ್‌ನಲ್ಲಿ ಜರುಗಿದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಹಲವು ದಶಕಗಳಿಂದ ಗಾಯಕನಾಗಿ ಸೇವೆ ಸಲ್ಲಿಸುತ್ತಿರುವ ವಿಐಪಿ ಮೆಲೋಡಿಸ್ ಮಾಲಿಕರು, ಗಾಯಕರು ಆದ ಪಂಪಾಪತಿ ಇಂಗಳಗಿ ಇವರಿಗೆ ರಾಜ್ಯ ಮಟ್ಟದ ಕನ್ನಡ ಗಾನ ಕೋಗಿಲೆ 2023 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಲವಾರು ವರ್ಷಗಳಿಂದಲೂ ಉತ್ತರ ಕರ್ನಾಟಕದಾದ್ಯಂತ ಬಿಡುವಿಲ್ಲದ ಸಂಗೀತ ಸಂಜೆಯ ಮೂಲಕ ಜನಮನಸೂರೆಗೊಂಡಿರುವ ಪಂಪಾಪತಿಯವರು, ಕಟ್ಟಡ ಕಾರ್ಮಿಕರ ಸಂಘನೆಯೊಂದಿಗೆ ಬೆಸೆದುಕೊಂಡು ಕಾರ್ಮಿಕರ ಸೇವೆಯನ್ನು ಮಾಡುತ್ತಿದ್ದಾರೆ.
ಅತ್ಯುತ್ತಮ ಧ್ವನಿವರ್ಧಕ ಗುಣಮಟ್ಟದ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿರುವ ಇವರು, ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ಜನಪ್ರೀಯ ಗಾಯಕರಾಗಿ ಹೊರಹೊಮ್ಮಿರುವುದು ಸೋಜಿಗದ ಸಂಗತಿ. ಪರಿಸರ ಸೇವಾ ಟ್ರಸ್ಟ್ ಇವರನ್ನು ಗುರುತಿಸಿ ಇತ್ತೀಚಿಗೆ ಪ್ರಶಸ್ತಿ ಪ್ರದಾನ ಮಾಡಿತು. ಈ ಸಂದರ್ಭದಲ್ಲಿ ಹೆಸರಾಂತ ಹಾಸ್ಯ ಭಾಷಣಕಾರ ಬಿ.ಪ್ರಾಣೇಶ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ ಹಾಗು ಪ್ರತಿಷ್ಠಾನ ಅಧ್ಯಕ್ಷ ಮಂಜುನಾಥ ಗುಡ್ಲಾನೂರು ಇತರರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 