ಹುಕ್ಕೇರಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ
World Environment Day celebration held at Hukkeri Court premises
ಲೋಕದರ್ಶನ ವರದಿ
ಹುಕ್ಕೇರಿ 08 : ಮನುಕುಲದ ಸ್ವಯಂ ಕೃತ ಅಪರಾಧದಿಂದ ಪರಿಸರ ಹಾಳಾಗುತ್ತಿದೆ. ಗಿಡ ಮರ ನಾಶ ಮಾಡಿ ಕಾಂಕ್ರೇಟ್ ನಗರಗಳ ನಿರ್ಮಾಣ ಮುಂದಾಗಿರುವುದೇ ಇಂತಹ ಕಾರ್ಯ ಮಾಡಿ ಪರಿಸರದ ಬಗ್ಗೆ ಮಾತನಾಡುವುದು ಸಮಂಜ ಸವಲ್ಲವೆಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಆದಿತ್ಯ ಕಲಾಲ ಹೇಳಿದರು. ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ ಸಸಿ ನೆಟ್ಟು ನೀರುಣಿಸಿ ಮಾತನಾಡಿದರು.
ಪ್ರಕೃತಿಯನ್ನು ಉಳಿಸಿ ಬೆಳೆಸಿದಲ್ಲಿ ನಮ್ಮೆಲ್ಲರ ಆರೋಗ್ಯ ಚೆನ್ನಾಗಿರುತ್ತದೆ ಎಂದ ಅವರು ಮುಂಬರುವ ಪೀಳಿಗೆಯ ಭವಿಷ್ಯವೂ ಉಜ್ವಲವಾಗಿರುವುದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಿ.ಎಲ್.ಸನದಿ ಮಾತನಾಡಿ, ಈ ವರ್ಷ 2.5 ಲಕ್ಷ ಸಸಿ ನೆಡುವಗುರಿ ಹೊಂದಲಾಗಿದ್ದು, ಹೋದ ವರ್ಷ ನೆಟ್ಟ ಸಸಿಯಲ್ಲಿ ಶೇ.85ರಷ್ಟು ಸಾಧನೆ ಮಾಡಲಾಗಿದೆಎಂದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಹನುಮಂತ ಇಂಗಳಗಿ ಮಾತನಾಡಿ, ಪ್ರಸಕ್ತ ವರ್ಷಇಲಾಖೆ ವತಿಯಿಂದ 10,000 ಸಸಿ ನೆಡುವಗುರಿ ಹೊಂದಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಕಾರ್ಯದರ್ಶಿ ಎಸ್.ಜಿ.ನದಾಫ, ಸಹ ಕಾರ್ಯದರ್ಶಿ ವಿಠ್ಠಲ್ ಘಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಎಜಿಪಿ ಅನಿಲ ಕರೋಶಿ, ನೋಟರಿಗಳಾದ ಎಂ.ಎಂ.ಪಾಟೀಲ, ಸಂಜೀವ ನಾಗನೂರಿ, ಬಸವರಾಜ ಶಿಂಧಿಹಟ್ಟಿ, ಎಸ್.ಎಸ್.ಮರಿನಾಯಿಕ, ವಕೀಲರಾದ ಭೀಮಸೇನ ಬಾಗಿ, ಆನಂದ ನಾಡಗೌಡ, ಈರಣ್ಣ ಹೂಲಿಕಟ್ಟಿ, ಸುರೇಶ ಗಾವಡ್ಯಾಗೋಳ, ಅಶೋಕ ಹುಲ್ಲೋಳಿ, ಈರಗೌಡ ಪಾಟೀಲ, ಬಿ.ಕೆ.ಪಾಟೀಲ, ಅಶೋಕ ತೊದಲ, ಅರಣ್ಯಾಧಿಕಾರಿಗಳಾದ ಎಸ್.ಎಸ್.ಕೋರೆ, ಸಿ.ಎನ್.ಹಿರೇಮಠ ಮತ್ತಿತರರಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 