ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ World Environment Day celebrated at primary school in Kunimellihalli village

ಸವಣೂರ 06 : ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿನ ಧರ್ಮಾವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೇ ಸಸಿ ನೆಡುವ ಮೂಲಕ ವಿಶಿಷ್ಟವಾಗಿ ವಿಶ್ವ ಪರಿಸರ ದಿನ ಆಚರಣೆ ಮಾಡಲಾಯಿತು.ವಿದ್ಯಾರ್ಥಿಗಳ ಪಾಕಲರಾದ ಸೋಮನಗೌಡ ನರೇಗಲ್ಲ ಹಾಗೂ ನಟರಾಜ ಬಡಿಗೇರ ಅವರು ಪರಿಸರ ಮನುಷ್ಯನಿಗೆ ಜೀವಾಳವಿದ್ದಂತೆ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದು ಅಗತ್ಯ ಎಂದರು.ಈ ಸಂದರ್ಭದಲ್ಲಿ ಪಾಕಲರಾದ  ಜ್ಯೋತಿ ಪಾಣಿಗಟ್ಟಿ,ಮುರಗೇಶ ಕೋಳೂರ,ಭಾಷಾಸಾಬ ಕುಡವಿ, ಲಕ್ಷ್ಮಿ ಹಾನಗಲ್,ಚನ್ನಮ್ಮ ಕುಲಕರ್ಣಿ,ಶಿಕ್ಷಕಿಯರಾದ ಅಕ್ಕಮಹಾದೇವಿ ನಡುವಿನಮನಿ,ವಿದ್ಯಾರ್ಥಿಗಳಾದ ವರ್ಷಾ, ವಿಶಾಲಗೌಡ ಕುಲಕರ್ಣಿ, ಭುವನಗೌಡ ನರೇಗಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.