ಸೃಜನಾತ್ಮಕ ಚಿಂತನೆ ಮತ್ತು ವಿಶಾಲ ಗುರಿಯೇ ಸಾಧನೆಗೆ ದಾರಿ: ಸ್ವಾಮಿ ಮೋಕ್ಷಾತ್ಮಾನಂದ

ಸೃಜನಾತ್ಮಕ ಚಿಂತನೆ ಮತ್ತು ವಿಶಾಲ ಗುರಿಯೇ ಸಾಧನೆಗೆ ದಾರಿ: ಸ್ವಾಮಿ ಮೋಕ್ಷಾತ್ಮಾನಂದ  Creative thinking and a broad vision are the path to achievement: Swami Mokshatmananda

ಲೋಕದರ್ಶನ ವರದಿ  

ಬೆಳಗಾವಿ, 29: ಮನುಷ್ಯನಲ್ಲಿ ಸೃಜನಾತ್ಮಕ ಆಲೋಚನೆ ಹಾಗೂ ಕಲ್ಪನಾ ಶಕ್ತಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಜೀವನದಲ್ಲಿ ಪರಿವರ್ತನೆ ತರಬೇಕಾದರೆ ವಿಶಾಲವಾದ ಗುರಿಯನ್ನು ಹೊಂದಿರಬೇಕು ಎಂದು ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಹೇಳಿದರು.  

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ವಿಜ್ಞಾನ, ವಾಣಿಜ್ಯ, ಕಲಾ ಹಾಗೂ ಬಿಸಿಎ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ 2026-27ನೇ ಸಾಲಿನ ‘ಪರಿವರ್ತನಾ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮನುಷ್ಯನಲ್ಲಿ ಮೂಡುವ ಆಲೋಚನೆಗಳ ಆಧಾರದ ಮೇಲೆಯೇ ಆತನ ಸಾಧನೆ ರೂಪುಗೊಳ್ಳುತ್ತದೆ. ಚೈತನ್ಯದ ಮೇಲೆ ಧ್ಯಾನ ಮಾಡುವವರಲ್ಲಿ ಹೊಸ ವಿಚಾರಗಳು ಹುಟ್ಟುತ್ತವೆ. ಇದರಿಂದ ವ್ಯಕ್ತಿಯಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ಆತ್ಮಚಿಂತನೆಯಿಂದಲೇ ನಿಜವಾದ ಪರಿವರ್ತನೆ ಆರಂಭವಾಗುತ್ತದೆ ಎಂದು ಹೇಳಿದರು.