ಮಿಲ್ಲತ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಿ ಡಾ .ಕಸ್ತೂರಿ ಕರಮುಡಿ

ಮಿಲ್ಲತ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಿ ಡಾ .ಕಸ್ತೂರಿ ಕರಮುಡಿ World Environment Day celebrated at Millat School: Protecting the environment is our responsibility

ಕೊಪ್ಪಳ  06: ಎಲ್ಲಾ ರೋಗಗಳ ಮೂಲ ಅಸ್ವಚ್ಚತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅನ್ನಪೂರ್ಣೇಶ್ವರಿ ಆಸ್ಪತ್ರೆಯ ವೈದ್ಯರಾದ ಡಾ/ಕಸ್ತೂರಿ ಕರಮುಡಿ ರವರು ಅಭಿಪ್ರಾಯಪಟ್ಟರು, ಅವರು ಶನಿವಾರ ಬೆಳಿಗ್ಗೆ ನಗರದ ಮಿಲ್ಲತ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದ   ಏರಿ​‍್ಡಸಿದ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಮನೆಗೊಂದು ಮರ ಬೆಳೆಸಿ, ನಗರವನ್ನು ನಂದನ ವನ ವನ್ನಾಗಿ ಮಾಡಬೇಕು ಈ ದಿಶೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು ಪರಿಸರ ಹಾಳಾದರೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪರಿಸರದ ಸಂರಕ್ಷಣೆ ಮಾಡಬೇಕು,

ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಉಂಟು ಮಾಡಬೇಕು, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ ಅದನ್ನು ಅರಿತುಕೊಂಡು ನಾವು ಶ್ರಮಿಸಬೇಕು ಎಂದು ಡಾ/ ಕಸ್ತೂರಿ ಕರಮುಡಿ ಹೇಳಿದರು.ಇದೆ ವೇಳೆ ಡಾ/ ಕಸ್ತೂರಿ ಕರಮುಡಿ ರವರಿಗೆ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು,ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಎಂ ಸಾಧಿಕ್ ಅಲಿ ವಹಿಸಿದ್ದರು, ಶಾಲೆಯ ಆಡಳಿತ ಮಂಡಳಿ ನಿರ್ದೇಶಕರುಗಳಾದ ಅಬ್ದುಲ್ ಅಜೀಜ ಮಾನ್ವಿಕರ್ ಮತ್ತು ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಸೇರಿದಂತೆ ಶಾಲೆಯ ಸಹ ಶಿಕ್ಷಕರಾದ ನಾಜಿಯಾ ಬೇಗಂ, ನರಸಿಂಹ ದೇಸಾಯಿ ಅನೇಕರು ಪಾಲ್ಗೊಂಡಿದ್ದು ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಅಜೀಜ್ ರೆವಡಿ ರವರು ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ  ವಂದಿಸಿದರು,