ವಿಶ್ವ ಸೈಕಲ್ ದಿನಾಚರಣೆ ಯಶಸ್ವಿ

ವಿಶ್ವ ಸೈಕಲ್ ದಿನಾಚರಣೆ ಯಶಸ್ವಿ  World Bicycle Day a success

ಲೋಕದರ್ಶನ ವರದಿ 

ಯಮಕನಮರಡಿ 05 : ಪರಿಸರ ಸ್ನೇಹಿ ಸೈಕಲ್ ಉಪಯೋಗಿಸುವದರಿಂದ  ಆರೋಗ್ಯ ಜೀವನಕ್ಕೆ ಉಪಯುಕ್ತವಾಗಿದೆ ಅಂತಹ ದುಂದು ವ್ಯಚ್ಚ ಖರ್ಚು ಇಲ್ಲದೆ ಸೈಕಲ್ಗಳನ್ನು ಜನ ಸಮುದಾಯದವರು ಉಪಯೋಗಿಸಿ ಸೈಕಲ್ ಸದುಪಯೋಗ ಪಡೆದುಕೊಳ್ಳಬೆಕೆಂದು ಹೆಚ್ ಬೊಳಗುಂಡಿ ಮುಖ್ಯೋಪಾಧ್ಯಾಯರು  ಸರ್ಕಾರಿ ಪ್ರೌಢ ಶಾಲೆ ಬಾಡ ಇವರು ವಿಧ್ಯಾರ್ಥಿ ಹಾಗೂ ಸಮುದಾಯಕ್ಕೆ ಕರೆ ನೀಡಿದರು ಅವರು ಕಳೆದ ಬುಧವಾರ ದಿನಾಂಕ 03 ಜೂನ 2026 ರಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಮೈ ಭಾರತ ಕೇಂದ್ರ, ಬೆಳಗಾವಿ ವಿಠ್ಠಲ ರುಕ್ಮಾಯಿ ಸಮುದಾಯ ಅಭಿವೃದ್ದಿ ಕಲಾಸಂಘ ಹರಗಾಪೂರ ಇವರ ಸಂಯುಕ್ತಾಶ್ರಯದಲ್ಲಿ ಬಾಡ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ಜರುಗಿದ ವಿಶ್ವ ಸೈಕಲ್ ದಿನಾಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ಅಥಿತಿಗಳಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಭರತ ಕಲಾಚಂದ್ರ ಮಾಲಿನ್ಯ ಯಾವುದೇ ದುಷ್ಯಪರಿಣಾಮ ಇಲ್ಲದ ಹಾಗೂ ಯಾವುದೇ ಇಂಧನ ಬಳಸದೆ  ಉಪಯೋಗಿಸುವ ಸೈಕಲ್ ಪ್ರತಿಯೊಂದು ಕುಟುಂಬದ ಕಾರ್ಯಕ್ಕೆ ಸಹಕಾರಿಯಾಗಿದೆ.  ಸೈಕಲ್ ಬಳಸಲು ಪ್ರತಿಯೊಬ್ಬರು ಮುಂದಾಗಬೆಕೆಂದರು ಸುನೀತಾ ಅರಳಿಕಟ್ಟಿ , ಬಿ.ಎಮ್ ಕಂಕಣವಾಡಿ, ಯು.ಎಸ್ ದಬಾಡೆ, ಪ್ರಕಾಶ ಜನಮಟ್ಟಿ ಉಪಸ್ಥಿತರಿದ್ದರು. ಗ್ರಾಮದ ಬೀದಿಗಳಲ್ಲಿ ಸೈಕಲ್ ಜೊತೆಗೆ ಯುವ ಜನರು ಜಾಗೃತಿ ಮೂಡಿಸಿದರು. ಶಿಕ್ಷಕಿಯರಾದ ಎಮ್ ಎಸ್‌. ಕಂಕಣವಾಡಿ ನಿರೂಪಿಸಿ ಸ್ವಾಗತಿಸಿದರು ಅಶ್ವಿನಿ ಸಂಬಾಳ ವಂದಿಸಿದರು.