ಚನ್ನಮ್ಮ ಪ್ರತಿಮೆ ಸ್ಥಾಪನೆ ವಿಳಂಬ ಖಂಡಿಸಿ ಹೋರಾಟದ ಎಚ್ಚರಿಕೆ

ಚನ್ನಮ್ಮ ಪ್ರತಿಮೆ ಸ್ಥಾಪನೆ ವಿಳಂಬ ಖಂಡಿಸಿ ಹೋರಾಟದ ಎಚ್ಚರಿಕೆ  Warning of protest over delay in installing Chennamma statue

ಲೋಕದರ್ಶನ ವರದಿ 

ಸಂಕೇಶ್ವರ ಸೆ.25: ಸ್ವಾತಂತ್ರ್ಯ ಹೋರಾಟದ ಬೆಳಗಿಚುಕ್ಕಿಯಾಗಿರುವ ವೀರರಾಣಿ ಕಿತ್ತೂರು ಚನ್ನಮ್ಮ ಅವರ ಪ್ರತಿಮೆ ಸ್ಥಾಪನೆಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ ಹಟ್ಟಿಹೊಳಿ, ದೀಲೀಪ್ ಹೊಸಮನಿ, ಪ್ರಮೋದ ಹೊಸಮನಿ ಹಾಗೂ ಸಂತೋಷ ಮುಡಸಿ, ಚನ್ನಮ್ಮ ಪ್ರತಿಮೆ ಸ್ಥಾಪನೆ ಕಾರ್ಯವು 2023ರಿಂದ ಇದುವರೆಗೆ ಪೂರ್ಣಗೊಂಡಿಲ್ಲ. ಮೂರು ವರ್ಷ ಕಳೆದರೂ ಕಾಮಗಾರಿ ಮುಗಿಯದಿರುವುದು ಖಂಡನೀಯ ಎಂದರು. ವೀರಶೈವ ಸಮಾಜದಿಂದ ಈವರೆಗೆ 20.75 ಲಕ್ಷ ಹಣ ಬಿಡುಗಡೆ ಮಾಡಲಾಗಿದ್ದು, ಪ್ರತಿಮೆ ನಿರ್ಮಾಣ ಕಾರ್ಯ ಯಾವ ಹಂತದಲ್ಲಿದೆ ಎಂಬುದನ್ನು ನಿರ್ಮಾಣ ಕಾರ್ಯ ಕೈಗೊಂಡಿರುವ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಮಹಾಪುರುಷರ ಪ್ರತಿಮೆ ಸ್ಥಾಪಿಸಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿದೆ. ನ.1ರೊಳಗೆ ಚನ್ನಮ್ಮ ಪ್ರತಿಮೆ ಲೋಕಾರೆ​‍್ಣಗೊಳಿಸಬೇಕು. ಇಲ್ಲವಾದರೆ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಕೆಲವರು ಸಮಾಜದ ಹೆಸರಿನಲ್ಲಿ ಸ್ವಯಂ ನಿರ್ಧಾರ ಕೈಗೊಂಡು ಕಾರ್ಯನಿರ್ವಹಿಸುತ್ತಿರುವುದು ಸರಿಯಲ್ಲ. ನ.1ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.  

ಪತ್ರಿಕಾಗೋಷ್ಠಿಯಲ್ಲಿ ಸಂತೋಷ ಮುಡಸಿ, ಮಹೇಶ ಹಟ್ಟಿಹೊಳಿ, ದೀಲೀಪ್ ಹೊಸಮನಿ, ಪ್ರಮೋದ ಹೊಸಮನಿ, ಸಂತೋಷ ಪಾಟೀಲ, ಗಣೇಶ ಪಾಟೀಲ, ಪಿಂಟು ಸೂರ್ಯವಂಶಿ, ಸುನೀಲ ಪಾಟೀಲ, ಪ್ರೀತಮ ಸುಮಾರೆ, ಮೋಶಿನ ಪಠಾಣ, ಶಿವಶಂಕರ ಭೋಸಲೆ, ಚೇತನ ಚೌಗಲಾ, ದುರದುಂಡಿ ಪಾಟೀಲ, ರಾಹುಲ್ ಶೇಖನವರ್, ಸಂದೀಪ್ ರಾಣವಗೋಳ, ಪ್ರಜ್ವಲ್ ಸುನದಾಳೆ, ಶಿವು ಸಮ್ಮಕನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.