ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಮತದಾನ ಇದರಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಿ- ರವಿಕುಮಾರ

ಗದಗ-24, ನಮ್ಮ ದೇಶದಲ್ಲಿ ಅತೀ ದೊಡ್ಡ ಹಬ್ಬ ಅಂದರೆ ಅದು ಪ್ರಜಾಪ್ರಭುತ್ವದಲ್ಲಿ ಎಲ್ಲರೂ ತಮ್ಮ ಹಕ್ಕುನ್ನು ಚಲಾಯಿಸುವ ಮತದಾನದ ಹಬ್ಬ, ಡಾ.ಬಿ.ಆರ್‌. ಅಂಬೇಡ್ಕರ ಅವರು ನಮ್ಮ ಭಾರತ ದೇಶಕ್ಕೆ ನೀಡಿರುವ ಸಂವಿಧಾನದ ಮೂಲಕ ಪ್ರತಿಯೂಬ್ಬ ನಾಗರಿಕರು ಮತದಾನ ಮಾಡುವ ಹಕ್ಕುನ್ನು ಪಡೆದುಕೊಂಡಿದ್ದಾರೆ, ಇವತ್ತು ಪ್ರಜಾಪ್ರಭುತ್ವದಲ್ಲಿ ಮತದಾನದಿಂದ ನಮ್ಮ ಜನಪ್ರತಿನಿದಿಗಳನ್ನು ಮತ್ತು ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರವನ್ನು ನಮ್ಮಗೆ ಸಂವಿಧಾನ ನೀಡಿದೆ, ಆದ್ದರಿಂದ ಈ ಹಬ್ಬದಲ್ಲಿ ಗದಗ-ಬೆಟಗೇರಿ ನಗರದ ಎಲ್ಲಾ ಸ್ಲಂ ನಿವಾಸಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಹೇಳಿದರು.

ಅವರು ಗದಗ ನಗರದ ಆಕಾಶನಗರ ಸ್ಲಂ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಜನಜಾಗೃತ ಆಂದೋಲನ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಮ್ಮ ದೇಶದ ಸಂವಿಧಾನದಲ್ಲಿ  ನೀಡಿರುವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿ ಇರುವ ಅಭ್ಯರ್ಥಿಗಳಿಗೆ ನಮ್ಮ ಸಂಘಟನೆಯ ಮೂಲಕ ಬೆಂಬಲ ನೀಡಲಾಗುವುದು, ಯಾವುದೇ ಕಾರಣಕ್ಕೊ ನಮ್ಮ ದೇಶದ ಸಂವಿಧಾನ ವಿರೋಧಿಗಳಿಗೆ ಮತವನ್ನು ನೀಡಬಾರದು, ನಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಮತ್ತು ಜಾತಿ. ಧರ್ಮ ಲಿಂಗ ತಾರತಮ್ಯ ಮಾಡದೇ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದತೆ ಹಾಗೂ ಶಾಂತಿಯ ವಾತಾವರಣ ನಿರ್ಮಿಸಲು ಮುಂದಾಗುವ ಅಭ್ಯರ್ಥಿಗೆ ನಮ್ಮ ಸ್ಲಂ ಜನರ ಸಂಪೂರ್ಣ ಬೆಂಬಲ ಇರುತ್ತದೆ ತಿಳಿಸಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್‌.ಮಾನ್ವಿ, ಕಾರ್ಯದರ್ಶಿ ಅಶೋಕ ಕುಸಬಿ, ಶಿವಾನಂದ ಶಿಗ್ಲಿ, ಮಂಜುನಾಥ ಶ್ರೀಗಿರಿ, ನಗೀನಾ ಎಲಿಗಾರ, ಪವಿತ್ರ ಸನದಿ, ಶಾರಧಾ ಹೋಗಾರ, ಕುಸಮಾ ಪೂಜಾರ, ಮುಸ್ಕಾನ ಎಲಿಗಾರ, ಹುಲಿಗೆಮ್ಮ ಮಂಡಲಗೇರಿ, ಲಕ್ಷ್ಮವ್ವ ಬಾಗಲಕೋಟಿ, ಮಂಜವ್ವ ಮಂಡಲಗೇರಿ, ಗಂಗಾ ಲಮಾಣಿ, ಶಶಿಕಲಾ ಭೋವಿ, ಅನ್ನಪೂರ್ಣ ಮೇಟಿ, ಶಮಶಾದ ಸೊಲ್ಲಾಪೂರ, ಮುದಕವ್ವ ಪುರದ, ರೇಖಾ ಮಾಳಿಮನಿ, ಮಂಜುಳಾ ಉಮಚಗಿ, ರೇಣುಕಾ ಉಮಚಗಿ, ರಜೀಯಾ ಮುಳಗುಂದ ಹಾಗೂ ಆಕಾಶನಗರ ಸ್ಲಂ ಪ್ರದೇಶದ ಸ್ಲಂ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದ್ದರು.