ಮೂಲಭೂತ ಸೌಕರ್ಯಗಳಿಲ್ಲದ ಜೀವಾಪುರ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಯರಗಟ್ಟಿ 02: ಬೆಳಗಾವಿ ಲೋಕಸಭಾ ಕ್ಷೇತ್ರದ ಭಾಗವಾದ ಸವದತ್ತಿ ಯಲ್ಲಮ್ಮನ ವಿಧಾನ ಸಭಾ ಕ್ಷೇತ್ರದ ಜೀವಾಪೂರ ಗ್ರಾಮಸ್ಥರಿಗೆ ಸುಮಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ಉತಾರ ನೀಡುತ್ತಾ ಬಂದಿದ್ದು ಗ್ರಾಮಸ್ಥರಿಂದ ನೀರಿನ ಕರ, ಮನೆ ಪಟ್ಟಿ ನೀಡಿದರೂ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳ ವ್ಯವಸ್ಥೆಯಿಲ್ಲದೆ ಸಮೀಪದ ಜೀವಾಪೂರ ಗ್ರಾಮದ 150ಕ್ಕೂ ಹೆಚ್ಚು ಜನರು ಮತದಾನವನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. 

ಗ್ರಾಮದಲ್ಲಿ ಸುಮಾರು 2200ರಷ್ಟು ಜನಸಂಖ್ಯೆಯಿದ್ದು, ಗ್ರಾಮಕ್ಕೆ ತಲ್ಲೂರು ಪಂಚಾಯತಿಯಲ್ಲಿ ಕಂಪ್ಯೂಟರ್ ಉತಾರಿಗೆ ಅರ್ಜಿ ಕೊಟ್ಟರೆ ಸ್ವೀಕರಿಸುತ್ತಿಲ್ಲ. ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಹಲವು ತಿಂಗಳುಗಳಿಂದ ಆಗ್ರಹಿಸಿದರು, ಗ್ರಾಮಸ್ಥರ ಬೇಡಿಕೆ ಈಡೇರದ ಕಾರಣ ಮತದಾನ ಬಹಿಷ್ಕಾರವನ್ನು ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೆಳಗಾವಿ ಲೋಕಸಭಾ ಕ್ಷೇತ್ರದ ಸವದತ್ತಿ ಯಲ್ಲಮ್ಮನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಯರಗಟ್ಟಿ ತಹಶೀಲ್ದಾರ ಎಸ್ ಎಸ್ ಇಂಗಳೆ ಅವರಿಗೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಮನವಿ ಸಲ್ಲಿಸಿದರು. 

ಗ್ರಾಮಸ್ಥರಿಗೆ ತಹಶೀಲ್ದಾರ ಎಸ್ ಎಸ್ ಇಂಗಳೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಗ್ರಾಮಸ್ಥರು ಸೇರಿ ಸಂತೋಷದಿಂದ ಮತದಾನ ಮಾಡಿ. ಶೀಘ್ರದಲ್ಲೇ ನಿಮ್ಮ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು. 

ಈ ವೇಳೆ ಪ್ರಕಾಶ್ ನಾರಿ, ಕಿಷ್ಟಪ್ಪ ನಾಯ್ಕರ, ಮಲ್ಲಪ್ಪ ನಾಯ್ಕರ, ಸಿದ್ದಪ್ಪ ಮಾದರ, ತಮ್ಮಣ್ಣ ಹಳಬರ, ರಮೇಶ ಅಗಸರ, ಫಕೀರ​‍್ಪ ನಾಯ್ಕರ, ಚಂದ್ರ​‍್ಪ ನಾರಿ, ಫಕೀರ​‍್ಪ ಬೂದಿಹಾಳ, ಫಕೀರವ್ವ ತಳವಾರ, ರುಕ್ಮವ್ವ ನಾಯ್ಕರ ಇದ್ದರು. 



ಗ್ರಾಮಸ್ಥರು ಸಮಸ್ಯೆಯ ಬಗ್ಗೆಯೂ ದೂರು ನೀಡಿದ್ದು, ವರದಿ ಪಡೆದು ಮತದಾರರ ಮನವೊಲಿಸಲು ಪ್ರಯತ್ನಿಸುತ್ತೇನೆ. 

ಯಶವಂತಕುಮಾರ,  

ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಚುನಾವಣೆ ಸ್ವೀಪ್ ಸಮಿತಿ ಅಧ್ಯಕ್ಷರು. 

ಜೀವಾಪುರ ಗ್ರಾಮಸ್ಥರಾದ ನಾವು ಗಾಯರಾಣ ಜಾಗದಲ್ಲಿ ಸರಿಸುಮಾರು 40 ರಿಂದ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಿರುತ್ತವೆ. ಮನೆಗಳಿಗೆ ಕೈಬರ ಪಂಚಾಯಿತಿ ಉತಾರಗಳು ಇರುತ್ತವೆ. ಮನೆ ಪಟ್ಟಿ, ನೀರಿನ ಬಿಲ್ಲು ಮತ್ತು ಕರೆಂಟ್ ಬಿಲ್ ಕಟ್ಟುತ್ತಾ ಬಂದಿರುತ್ತೇವೆ. 2023 ಮಾರ್ಚ್‌ ತಿಂಗಳಲ್ಲಿ ಕರ್ನಾಟಕ ಸರ್ಕಾರದಿಂದ ನಾವುಗಳು ಕಟ್ಟಿಕೊಂಡಿರುವ ಮನೆಗಳಿಗೆ ಕಂದಾಯ ಸಚಿವರಿಂದ ಹಕ್ಕುಪತ್ರ ನೀಡಿರುತ್ತಾರೆ.  

ಸದರಿ ಹಕ್ಕು ಪತ್ರವನ್ನು ಕೊಟ್ಟು ತಲ್ಲೂರು ಪಂಚಾಯತಿಯಲ್ಲಿ ಕಂಪ್ಯೂಟರ್ ಉತಾರಿಗೆ ಅರ್ಜಿ ಕೊಟ್ಟರೆ ಸ್ವೀಕರಿಸುತ್ತಿಲ್ಲ. 150 ಮನೆಗಳು ಗ್ರಾಮ ಠಾಣಾ ವ್ಯಾಪ್ತಿಗೆ ಬಂದಿರುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಂಪ್ಯೂಟರ್ ಉತ್ತರಾದಲ್ಲಿ ಸಾಲ ಸೌಲಭ್ಯ ಮತ್ತು ಇತರೆ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಸದರಿ ಮನೆಗಳಿಗೆ ಕಂಪ್ಯೂಟರ್ ಉತಾರ್ ಕೊಡಲು ತಿಳಿಸಿದರು ಕೊಡುತ್ತಿಲ್ಲ ಮನವಿಯನ್ನು ಸ್ವೀಕರಿಸುತ್ತಿಲ್ಲಾ ಸರ್ಕಾರದಿಂದ ಹಕ್ಕು ಪತ್ರ ನೀಡಿದರು ಕಂಪ್ಯೂಟರ್ ಉತಾರ ಕೊಡದೆ ನಿರ್ಲಕ್ಷ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆ ದಿನದಂದು ಮತದಾನ ಬಹಿಷ್ಕಾರ ಮಾಡಲಾಗುತ್ತದೆ.

ರುಕ್ಮವ್ವ ನಾಯ್ಕರ. ಜೀವಾಪೂರ ಗ್ರಾಮಸ್ಥೆ