ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ನವೀನ್ ಚಂದ್ರರಿಗೆ ಅತ್ಯುತ್ತಮ ನಟ ಪ್ರಶಸ್ತಿ

ಬಳ್ಳಾರಿ 02: ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಉದಯೋನ್ಮುಖ ನಟ ನವೀನ್ ಚಂದ್ರ ಅವರು 2024 ರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಬಳ್ಳಾರಿ ನಗರದವರೇ ಆದ, ಸಾರಿಗೆ ಇಲಾಖೆಯ ನೌಕರನ ಪುತ್ರ ನವೀನ್ ಚಂದ್ರಗೆ ಈ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಏ.30 ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದೆ  

ಕೃಷಿವ್ ಪ್ರೊಡಕ್ಷನ್ ಅಡಿಯಲ್ಲಿ ಯಶವಂತ್ ಮುಲುಕುಟ್ಲ ನಿರ್ಮಿಸಿದ ಶ್ರೀಕಂಠನಾಗೋತಿ ನಿರ್ದೇಶನದ "ಮಂತ್ ಆಫ್ ಮಧು" ಚಿತ್ರದಲ್ಲಿನ ಅವರ ಅದ್ಬುತ ಅಭಿನಯವನ್ನು ಪರಿಗಣಿಸಿ ಈ ಪ್ರಶಸ್ತಿನೀಡಲಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವವು ಪ್ರತಿ ವರ್ಷ ವಿವಿಧ ವಿಭಾಗಗಳಲ್ಲಿ ಸಿನಿಮಾದಲ್ಲಿನ ಶ್ರೇಷ್ಠತೆಯನ್ನು ಗುರಿತಿಸಿ ಪ್ರಶಸ್ತಿಗಳನ್ನು ನೀಡುತ್ತದೆ.  ದೇಶದ ಮೂಲೆ ಮೂಲೆಗಳಿಂದ ಕಲಾವಿದರು ಈ ಗೌರವಾನ್ವಿತ ಪ್ರಶಸ್ತಿಗಳಿಗಾಗಿ ಸ್ಪರ್ಧಿಸುತ್ತಾರೆ, ಇದು ಪ್ರತಿಭೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕಲಾವಿದರ ಸಮರೆ​‍್ಣಗೆ ಸಾಕ್ಷಿಯಾಗಿ ಪ್ರಶಸ್ತಿ ಲಭ್ಯವಾಗುತ್ತದೆ ಎಂದರೆ ತಪ್ಪಾಗಲಾರದು.  

ನವೀನ್ ಚಂದ್ರ ಅವರು  ಅಸಂಖ್ಯಾತ ತೆಲುಗು, ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ, 2011 ರಲ್ಲಿ ತೆರೆಕಂಡ ತೆಲುಗು ಭಾಷೆಯ 'ಅಂದಾಲ ರಾಕ್ಷಸಿ' ನಲ್ಲಿ ತಮ್ಮ ಚೊಚ್ಚಲ ಸಿನಿಮಾ ಪ್ರವೇಶದೊಂದಿಗೆ ಅರವಿಂದ ಸಮೇತ ವೀರರಾಘವ, 'ಗೇಮ್ ಚೇಂಜರ್' ಸಿನಿಮಾದಲ್ಲಿನ ಪಾತ್ರ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದನ್ನು ಮುಂದುವರೆಸಿದ್ದಾರೆ. ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿರುವ ನಂದಿನಿ ಜೆಎಸ್ ನಿರ್ದೇಶಿಸಿದ 'ಇನ್ಸ್‌ಪೆಕ್ಟರ್ ರಿಷಿ' ವೆಬ್ ಸರಣಿಯಲ್ಲಿ ನವೀನ್ ಚಂದ್ರ ಅವರ ಚಿತ್ರಣವು ಡಿಜಿಟಲ್ ಕ್ಷೇತ್ರದಲ್ಲಿ ಇತ್ತೀಚಿನ ಈ ಪ್ರವೇಶವು ರಾಷ್ಟ್ರವ್ಯಾಪಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.