ನೂತನ ಬಸ್ಗೆ ಗ್ರಾಮಸ್ಥರಿಂದ ಸ್ವಾಗತ
Villagers welcome new bus
ದೇವರಹಿಪ್ಪರಗಿ 28: ಬಸವನ ಬಾಗೇವಾಡಿಯಿಂದ ಕೊಂಡಗೂಳಿ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ಸಂಚರಿಸುವ ನೂತನ ಬಸ್ಗೆ ಗ್ರಾಮಸ್ಥರು ಹಾರ ಹಾಕಿ, ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಸ್ವಾಗತ ಕೋರಿದರು.
ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ ಸಾರಿಗೆ ಇಲಾಖೆ, ಬಸವನ ಬಾಗೆವಾಡಿ - ಹೂವಿನ ಹಿಪ್ಪರಗಿ, ಕುದುರಿ ಸಾಲವಾಡಗಿ, ಯಾಳವಾರ, ಕೊಂಡಗೂಳಿ, ಕೋರವಾರ ಹಾಗೂ ಕೊಕಟನೂರ ಮಾರ್ಗವಾಗಿ ಸಿಂದಗಿ ಪಟ್ಟಣಕ್ಕೆ ನೂತನ ಬಸ್ ಸಂಚಾರ ಆರಂಭಿಸಿದೆ.
ಈ ಸೇವೆ ಆರಂಭಿಸಲು ಸಹಕರಿಸಿದ ಶಾಸಕ ರಾಜುಗೌಡ ಪಾಟೀಲ ಕುಡರಿಸಲವಾಡಗಿ ಹಾಗೂ ವಿಜಯಪುರ ವಿಭಾಗದ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ನೂತನ ಬಸ್ ಸೇವೆಯಿಂದ ವಿದ್ಯಾರ್ಥಿಗಳು, ರೈತರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವು ಕೊಳ್ಳಾರಿ, ಬಾಬು ನದಾಫ್, ಉಮೇಶ ಹಣ್ಣಿ, ಕಾಸಿಲಿಂಗ ಸಿಂದಗೇರಿ, ಅಕ್ಷಯ ಗೊಬ್ಬರ, ಕಲ್ಲು ಅವರಾದಿ, ಶಿವಾನಂದ ಗೊಬ್ಬರ, ಮಹಿಬೂಬ ಖಾಜಿ, ಮುನೀರ್ ನದಾಫ್, ಬಸವಲಿಂಗಯ್ಯ ಹಿರೇಮಠ, ಬಸವರಾಜ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 