ಹುಬ್ಬಳ್ಳಿ ಬಸವೇಶ್ವರ ನಗರ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ಹುಬ್ಬಳ್ಳಿ ಬಸವೇಶ್ವರ ನಗರ ಪ್ರಾಥಮಿಕ ಶಾಲೆಯಲ್ಲಿ  ವನಮಹೋತ್ಸವ ಆಚರಣೆ Vanamahotsava celebration at Basaveshwara Nagar Primary School, Hubli

ಹುಬ್ಬಳ್ಳಿ 07 :  ವಿಶ್ವ ಪರಿಸರ ದಿನ ಅಂಗವಾಗಿ  ಬಸವೇಶ್ವರ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ  ವನಮಹೋತ್ಸವ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ   ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.  ಪರಿಸರ ಉಳಿಸಿ, ಪರಿಸರ ಬೆಳೆಸಿ, ನಮ್ಮ ಭೂಮಿ ನಮ್ಮ ಜವಾಬ್ದಾರಿ, ಮುಂತಾದ ಘೋಷಣೆಗಳನ್ನು  ಹೇಳುತ್ತಾ ಶುದ್ಧ ಗಾಳಿ, ಶುದ್ಧ ನೀರು, ಸ್ವಚ್ಛತೆ, ಪರಿಸರ ಸಂರಕ್ಷಣೆ, ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಕ್ಕಳಲ್ಲಿ   ಜಾಗೃತಿ ಮೂಡಿಸಿದರು.  

  ಪರಿಸರ ಸಂರಕ್ಷಣೆ ಮಾಡಿ, ನಮ್ಮ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ, ಈ ಭೂಮಿಯೇ ಸ್ವರ್ಗವಾಗುತ್ತದೆ.  ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಪ್ರಕೃತಿಯನ್ನು ಸಂರಕ್ಷಿಸಲು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.  ನಿವೃತ್ತ ವೈದ್ಯಾಧಿಕಾರಿ, ಹಿರಿಯರಾದ ಡಾ. ವಿ. ಬಿ.  ನಿಟಾಲಿ  ಅವರು ಉತ್ತಮ  ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತು ಹಲವಾರು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.  ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಡಾ. ಎಚ್‌. ಬಿ ಕೊರವರ, ಶಿಕ್ಷಕಿಯರಾದ ಅಕ್ಕಮ್ಮ ವಿ. ಶೆಟ್ಟರ್ , ಶಕುಂತಲಾ ಜಿ ನವಲಗುಂದ, ಅನಸೂಯಾ ವೈ ಮರಕುಂಬಿ, ವಿದ್ಯಾ ಬನ್ನಾ  , ಸವಿತಾ ಪಿ ಮಗದೂರ, ಶ್ರೀದೇವಿ ಎಚ್  ಕುಲಕರ್ಣಿ, ವೀಣಾ ಪ್ರ. ಪಾಟೀಲ್, ಜ್ಯೋತಿ ಶಾ ಕೆಲದಿಮಠ, ಶಾಲೆಯ ಮಕ್ಕಳು, ಪಾಲಕರು, ಮುಂತಾದವರು ಉತ್ಸಾಹದಿಂದ ಭಾಗವಹಿಸಿದ್ದರು.  ಹೊರಕೇರಿ ಮಾಸ್ತರ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹಿರಿಯ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ  ಡಾ. ಎಚ್‌. ಬಿ ಕೊರವರ ಅವರಿಗೆ ಗ್ರಂಥ ನೀಡಿ, ಮಾಲಾರೆ​‍್ಣ ಮಾಡಿ ಆತ್ಮೀಯವಾಗಿ, ಹುತ್ಪೂರ್ವಕವಾಗಿ ಗೌರವಿಸಿದರು.