ಕಾರವಾರ

ದಾಂಡೇಲಿ ಸಮೀಪದ ಪಣಸೋಳಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ದಾಂಡೇಲಿ ಸಮೀಪದ ಪಣಸೋಳಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ

ದಾಂಡೇಲಿ 25: ದುಬಾರೆ ಅನಾಹುತದ ಬಳಿಕ ದಾಂಡೇಲಿ ಸಮೀಪದ ಪಣಸೋಳಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಸುರಕ್ಷತೆ ಮತ್ತು ಪ್ರವಾಸೋದ್ಯಮದ ಸಮತೋಲನ ಸಾಧಿಸಿದರೆ ಮತ್ತೆ ಜೀವಂತವಾಗಲಿದೆ ಕಾಳಿ ತಟದ ಆಕರ್ಷಣೆ.ದಾಂಡೇಲಿ ಸಮೀಪದ ಪಣಸೋಳಿ ಆನೆ ಶಿಬಿರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರಕೃತಿ ಮತ್ತು ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾಳಿ ಅರಣ್ಯದ ನಿಸರ್ಗ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ಶಿಬಿರದಲ್ಲಿ ಸಾಕಾನೆಗಳ ಆರೈಕೆ, ಸ್ನಾನ, ಆಹಾರ ವಿತರಣೆ ಮತ್ತು ತರಬೇತಿ ಕ್ರಮಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು.

ವಿಶೇಷವಾಗಿ ಮಕ್ಕಳಿಗೆ ಆನೆಗಳನ್ನು ಸಮೀಪದಿಂದ ನೋಡುವ ಅವಕಾಶ ನೀಡುತ್ತಿದ್ದ ಈ ತಾಣ ಕುಟುಂಬ ಪ್ರವಾಸದ ಆಕರ್ಷಣೆಯಾಗಿ ರೂಪುಗೊಂಡಿತ್ತು.ಆದರೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದ ದುರ್ಘಟನೆ ಬಳಿಕ ರಾಜ್ಯದ ಅನೇಕ ಆನೆ ಶಿಬಿರಗಳಲ್ಲಿ ಸುರಕ್ಷತಾ ಕಾರಣ ಉಲ್ಲೇಖಿಸಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ಪರಿಣಾಮ ದಾಂಡೇಲಿಯ ಪಣಸೋಳಿ ಶಿಬಿರಕ್ಕೂ ತಟ್ಟಿದ್ದು, ಸ್ಥಳೀಯ ಪ್ರವಾಸೋದ್ಯಮ, ಸಣ್ಣ ವ್ಯಾಪಾರಿಗಳು, ಜೀಪ್ ಚಾಲಕರು, ಮಾರ್ಗದರ್ಶಕರು ಮತ್ತು ಹೋಂ ಸ್ಟೇ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ...... 


ಸುದ್ದಿ ಓದಿ