ಟಿಪ್ಪರ್ ಚಾಲಕನಿಗೆ ಅವಾಚ್ಯ ಶಬ್ಧ ಬಳಸಿ, ಬೆದರಿಕೆ : ದೂರು ದಾಖಲು
Tipper driver threatened by using abusive language: Complaint filed
ಕಾರವಾರ 15: ಜಲ್ಲಿ ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಅಡ್ಡಗಟ್ಟಿ, ಚಾಲಕನಿಗೆ ಬೆದರಿಕೆ ಹಾಕಿದ ಈರ್ವರ ಮೇಲೆ ಮಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆಂದು ಯಲ್ಲಾಪುರದ ಟಿಪ್ಪರ್ ಚಾಲಕ ತನಜೀರ್ ಆದಂ ಶೇಖ್ ಪೊಲೀಸರಿಗೆ ದೂರು ನೀಡಿದ್ದಾರೆ. ತನಜೀರ್ ಆದಂ ಶೇಖ್, ಹುಬ್ಬಳ್ಳಿಯ ತಡಸದಿಂದ ಜಲ್ಲಿಕಲ್ಲು ತುಂಬಿಕೊಂಡು ಕೈಗಾ ಅಣುಸ್ಥಾವರ 5- 6 ಕಾಮಗಾರಿ ಸ್ಥಳಕ್ಕೆ ತೆರಳುವಾಗ ದಾರಿ ಮಧ್ಯೆ ಕೆರವಡಿ ಗ್ರಾಮದ ಹತ್ತಿರ, ರಸ್ತೆಯ ಮೇಲೆ ಟಿಪ್ಪರಗೆ ಇಬ್ಬರು ಅಡ್ಡ ಹಾಕಿದರು. ಕೆರವಡಿ ಗ್ರಾಮದ ರವಿ ದೇವಿದಾಸ ನಾಯ್ಕ ಹಾಗೂ ಕಿರಣ ದೇವಿದಾಸ ನಾಯ್ಕ ಎಂಬಿಬ್ಬರು ಅಡ್ಡಗಟ್ಟಿ ಬೋ.... ಮಗನೇ, ಕೈಗಾಕ್ಕೆ ಯಾಕೆ ಬರುತ್ತಿ ಇದು ನಿಮ್ಮಪ್ಪನ ರೋಡಾ, ಕೆಳಗೆ ಬಾ ನೀನಗೆ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಧಮ್ಮಿಗೆ ಬೆದರಿದ ಟಿಪ್ಪರ್ ಚಾಲಕ ವಾಹನದ ಕಿಟಕಿಯ ಗ್ಲಾಸ್ ಹಾಕಿಕೊಂಡಾಗ, ಆರೋಪಿಗಳು ಕಲ್ಲಿನಿಂದ ಟಿಪ್ಪರ್ನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಚಾಲಕನ ಬಲಗೈಗೆ ಗಾಯಗೊಳಿಸಿ, ಮತ್ತೆ ಇದೆ ದಾರಿಯಲ್ಲಿ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಈ ಘಟನೆಯಿಂದ ಗಾಸಿಗೊಂಡ ಚಾಲಕ, ನೇರ ಮಲ್ಲಾಪುರ ಪೋಲಿಸ ಠಾಣೆಗೆ ಟಿಪ್ಪರ್ ಚಲಾಯಿಸಿ ತಂದು, ಪೊಲೀಸರಿಗೆ ಘಟನೆ ವಿವರಿಸಿ, ದೂರು ನೀಡಿದ್ದಾರೆ. ಮುಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 