ಶ್ರೀಗಳ ಇಷ್ಟಲಿಂಗಕ್ಕೆ ಭಕ್ತರಿಂದ ಸಹಸ್ರ ಬಿಲ್ವಾರ್ಚನೆ
Thousands of devotees offer prayers at the Lord's Ishtalinga
ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯರ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ಸಂಪನ್ನ
ಧಾರವಾಡ, 23 : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರಾವಣ ಮಾಸದ ಪರ್ವಕಾಲದಲ್ಲಿ ಒಂದು ತಿಂಗಳು ನಿತ್ಯ ಪ್ರಾತಃಕಾಲ ನಡೆಸಿದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಸಂಪನ್ನಗೊಂಡಿತು.
ಶ್ರಾವಣ ಮಾಸದ ಅಂತಿಮ ದಿನದ ಸಂದರ್ಭದಲ್ಲಿ ಭಕ್ತಗಣ ಅಭಿನವ ಶಾಂತಲಿಂಗ ಶಿವಾಚಾರ್ಯರ ಇಷ್ಟಲಿಂಗಕ್ಕೆ ಹುಬ್ಬಳ್ಳಿ, ನವನಗರ, ಧಾರವಾಡ, ಅಮ್ಮಿನಬಾವಿ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹಲವಾರು ಕಡೆಗಳಿಂದ ಆಗಮಿಸಿದ್ದ ಭಕ್ತರು ಈ ಮಹಾಪೂಜೆಯಲ್ಲಿ ಪಾಲ್ಗೊಂಡು ಸಹಸ್ರ ಬಿಲ್ವಾರ್ಚನೆ ಮಾಡಿ ಭಕ್ತಿ ಸಮರ್ಿಸಿ ಆಶೀರ್ವಾದ ಪಡೆದರು.
ಅಮ್ಮಿನಬಾವಿ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ಆಯುರ್ವೇದ ತಜ್ಞ ಡಾ. ಈರಣ್ಣ ಅಮ್ಮಿನಬಾವಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕರ್ಕಿ, ಯಲ್ಲಪ್ಪ ಕರ್ಕಿ ಸಂಕಲ್ಪ ಸೇವೆ ಸಲ್ಲಿಸಿದರು. ಇದಕ್ಕೂ ಮೊದಲು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಮೂಲ ಪುರುಷರಾದ ಶ್ರೀಗುರುಶಾಂತಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೂ ಸಹ ಏಕಾದಶ ಮಹಾರುದ್ರಾಭಿಷೇಕ ನಡೆಯಿತು. ವಕೀಲ ಸುನೀಲ ಗುಡಿ ಅವರ ದಾಸೋಹ ಸೇವೆಯಲ್ಲಿ ಪ್ರಸಾದ ವಿತರಣೆ ಜರುಗಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 