ಬಂಜಾರ ಸಮಾಜದ ಸಂಘಟನೆಗೆ ಯುವಪೀಳಿಗೆಯೇ ಶಕ್ತಿ: ರವಿಕಾಂತ ಅಂಗಡಿ

ಬಂಜಾರ ಸಮಾಜದ ಸಂಘಟನೆಗೆ ಯುವಪೀಳಿಗೆಯೇ ಶಕ್ತಿ: ರವಿಕಾಂತ ಅಂಗಡಿ The youth is the strength for organizing the Banjara community: Ravikant Angadi

ಶಿರಹಟ್ಟಿ 28  : ಜಿಲ್ಲೆಯ ಮಜ್ಜೂರ ತಾಂಡಾದಲ್ಲಿ ಗೋರಸೇನಾ ರಾಜ್ಯಾಧ್ಯಕ್ಷರು ಹಾಗೂ ವಕೀಲರಾದ ರವಿಕಾಂತ ಅಂಗಡಿ ಅವರು ಯುವಕರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಬಂಜಾರ ಸಮಾಜದ ಸಂಘಟನೆ, ಬಂಜಾರ ಸಂಸ್ಕೃತಿಯ ಉಳಿವು ಮತ್ತು ಬಾಲಸಂಸ್ಕಾರ ಕೇಂದ್ರಗಳ ಪ್ರಾರಂಭದ ಕುರಿತು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರವಿಕಾಂತ ಅಂಗಡಿ ಅವರು, “ಸಮಾಜದ ಸಮಗ್ರ ಅಭಿವೃದ್ಧಿಗೆ ಯುವಕರು ಸಂಘಟಿತರಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯಕ.

ಬಂಜಾರ ಸಂಸ್ಕೃತಿ, ಪರಂಪರೆ ಮತ್ತು ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಪೀಳಿಗೆಯ ಮೇಲಿದೆ,” ಎಂದು ಹೇಳಿದರು. ಗದಗದಲ್ಲಿ ಮೇ 31, 2026ರಂದು ನಡೆಯಲಿರುವ ಬೃಹತ್ ಹಿಂದೂ ಸಮ್ಮೇಳನದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು. ತಾಂಡಾಗಳಲ್ಲಿ ಎದುರಾಗುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ಮತ್ತು ಜಾಗೃತಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ತುಕಾರಾಮ ಲಮಾಣಿ, ಗಣೇಶ ಚನ್ನಪ್ಪ ಲಮಾಣಿ, ಪ್ರಕಾಶ ಈಶ್ವರ ಲಮಾಣಿ, ಈರಣ್ಣ ಶಿವಪ್ಪ ಲಮಾಣಿ, ಶರಣಪ್ಪ ಕಾಶಪ್ಪ ಲಮಾಣಿ, ಕೀರಣ ರವಿ ರಾಠೋಡ್, ರವಿ ಸೊಮಲಪ್ಪ ಲಮಾಣಿ, ತುಲಾರಾಮ ಈರ​‍್ಪ ಲಮಾಣಿ, ವಿನೋದ ಈರ​‍್ಪ ಲಮಾಣಿ, ಪ್ರಭು ಸೊಮಲಪ್ಪ ಲಮಾಣಿ, ಸಂಜು ಮಾನಪ್ಪ ಲಮಾಣಿ, ಅಶೋಕ್ ಲಮಾಣಿ, ಸುರೇಶ್ ಲಮಾಣಿ, ಅಪ್ಪು ಲಮಾಣಿ, ಕೇಶಪ್ಪ ಹೇಮಲಪ್ಪ ಲಮಾಣಿ, ವಿಕಾಸ್ ಲಮಾಣಿ, ಚೆನ್ನಪ್ಪ ಲಮಾಣಿ, ಜಗದೀಶ ಲಮಾಣಿ, ಸಂಜು ಕೆ. ಲಮಾಣಿ, ಮುತ್ತು ಶಂಕ್ರ​‍್ಪ ಲಮಾಣಿ, ಶೇಖರ್ ಲಮಾಣಿ, ಚಂದ್ರು ಲಮಾಣಿ, ಪ್ರಶಾಂತ ಠಾವರೇಪ್ಪ ಲಮಾಣಿ ಹಾಗೂ ರಮೇಶ್ ಮಾನಪ್ಪ ಲಮಾಣಿ ಸೇರಿದಂತೆ ತಾಂಡಾದ ಅನೇಕ ಯುವಕರು ಉಪಸ್ಥಿತರಿದ್ದರು.