ಶಂಕರಲಿಂಗೇಶ್ವರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ

The fair festival of Shankaralingeshwara Mahaswamy

ಶಂಕರಲಿಂಗೇಶ್ವರ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ  

ತಾಳಿಕೋಟಿ 21:  ತಾಲೂಕಿನ ಕೆಸರಟ್ಟಿ ಗ್ರಾಮದ  ಶಂಕರಲಿಂಗ ಗುರುಪೀಠ ಮಹಾಸಂಸ್ಥಾನ ಮಠದ ಘೋರ ತಪಸ್ವಿ ಶಂಕರ ಲಿಂಗೇಶ್ವರ ಮಹಾಸ್ವಾಮಿಗಳ 95ನೇ ಜಾತ್ರಾ ಮಹೋತ್ಸವ ಹಾಗೂ ಸೋಮಲಿಂಗ ಮಹಾಸ್ವಾಮಿಗಳ 19ನೇ ತುಲಾಭಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದ ಅಂಗವಾಗಿ ಮೇ 27 ರಿಂದ 28 ರ ವರೆಗೆ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ಮೇ 27 ಮಂಗಳವಾರದಂದು ಬೆಳಿಗ್ಗೆ 5-00 ರಿಂದ 7-00 ವರೆಗೆ ಶಂಕರಲಿಂಗೇಶ್ವರ ಮಹಾಸ್ವಾಮಿಗಳ ಗದ್ದುಗೆಗೆ ಹಾಗೂ ಅಮೋಘಸಿದ್ಧ ದೇವರ ಮೂರ್ತಿಯ ಪೂಜಾರತಿ ಹಾಗೂ ಮಂಜು ರಾಥೋಡ ನಾಗೂರ ತಾಂಡಾ  ಗೋಪಾಲ ಚೌಹಾನ್ ಕಾಳಗಿ ತಾಂಡಾ ಪರಿವಾರದಿಂದ ಪೂಜ್ಯ ಸೋಮಲಿಂಗ ಮಹಾಸ್ವಾಮಿಗಳ ರುದ್ರಾಕ್ಷಿ ಕೀರೀಟ ಧಾರಣೆ ನಡೆಯುವುದು. ಸಂಜೆ 6:00 ಗಂಟೆಗೆ  ನಾಮದೇವ ಚಂಪು ಚವಾಣ್ ಹಾಗೂ  ಸಂತೋಷ್ ಚಂಪು ಚವಾಣ್ ನಾಗೂರ ತಾಂಡಾ ಪರಿವಾರದಿಂದ ಪರಮ ಪೂಜ್ಯ  ಸೋಮಲಿಂಗ ಮಹಾಸ್ವಾಮಿಗಳ 19ನೇ ತುಲಾಭಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಜರಗುವುದು.  

ರಾತ್ರಿ 10.30 ಗಂಟೆಗೆ ಸುಪ್ರಸಿದ್ಧ  ಭೀಮ ಹರಿಸಿಂಗ್ ನಾಯಕ್ ಬೊಮ್ಮನಜೋಗಿ ತಾಂಡಾ ಹಾಗೂ  ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ ಕುಮಾರಿ ಶಾಂತಾ ಅಕ್ಕ ಹಡಲಗೇರಿ, ಮಾಳಿಂಗೇಶ್ವರ ಡೊಳ್ಳಿನ ಗಾಯನ ತಂಡ ಹಾಗೂ ಲೋಕೇಶ ಸೋಮು ರವಿ ಬೊಮ್ಮಗೊಂಡ ತಾಂಡಾ ಅವರಿಂದ ಡೊಳ್ಳಿನ ಗಾಯನ ಕಾರ್ಯಕ್ರಮ ನಡೆಯುವುದು. ದಿನಾಂಕ 28-5-2025ರಂದು ಅಮೃತಗಳಿಗೆಯ 2 ಗಂಟೆಗೆ ಗಂಗಸ್ಥಳ ಪೂಜೆ, ಪ್ರಾತ 4:30 ಗಂಟೆಗೆ  ಅಮೋಘಸಿದ್ದೇಶ್ವರ ಹೇಳಿಕೆ ನಡೆಯುವುದು ನಂತರ ಬೆಳಿಗ್ಗೆ 7:00 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳ ಗಳೊಂದಿಗೆ ಪಲ್ಲಕ್ಕಿ ಉತ್ಸವ ಜರಗುವುದು. ಶ್ರೀ ಪ್ರೇಮ ಸಿಂಗ್ ನಾಯಕ ವ್ಯವಸ್ಥಾಪಕರು ಎಸ್ ಬಿ ಐ ಬ್ಯಾಂಕ್ ಇವರಿಂದ ಮಹಾಪ್ರಸಾದ ಸೇವೆ ಇರುವುದು. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವತ್ತೂ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು  ಶಂಕರಲಿಂಗ ಗುರುಪೀಠ ಮಹಾ ಸಂಸ್ಥಾನ ಮಠದ ಪ್ರಕಟಣೆ ತಿಳಿಸಿದೆ.