ಇಸ್ಲಾಂ ವಾಸ್ತುಕಲೆಯಲ್ಲಿ ಸೌಂದರ್ಯ, ವಿಜ್ಞಾನ, ಸಂಸ್ಕೃತಿಯ ಸಂಗಮ- ಅಪ್ಪಣ್ಣ ಹಂಜೆ
The confluence of beauty, science, and culture in Islamic architecture - Appanna Hanje
ಲೋಕದರ್ಶನ ವರದಿ
ಗದಗ 07: ಇಸ್ಲಾಂ ವಾಸ್ತುಕಲೆ ಕೇವಲ ಕಟ್ಟಡಗಳ ನಿರ್ಮಾಣವಲ್ಲ, ಬದಲಿಗೆ ಅದು ಧಾರ್ಮಿಕ ನಂಬಿಕೆಗಳು, ಆಧ್ಯಾತ್ಮಿಕತೆ, ಅನಂತತೆ, ನಿರಂತರತೆ, ಸೌಂದರ್ಯದ ಸಂಕೇತವಾಗಿದ್ದು, ಈ ಪರಿಕಲ್ಪನೆಯಲ್ಲಿ ಮಸೀದಿ, ದರ್ಗಾ, ಈದ್ಗಾ, ಗೋರಿ, ಸಮಾಧಿ ಮುಂತಾದವುಗಳನ್ನು ಅರ್ಥೈಸಿಕೊಂಡಾಗ ಮಾತ್ರ ಇಸ್ಲಾಂ ವಾಸ್ತುಕಲೆಯ ವೈಶಿಷ್ಟ್ಯಗಳ ಹಿರಿಮೆಯನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವೆಂದು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಹೇಳಿದರು. ಅವರು ಗದಗ ನಗರದ ಎಸ್.ಎಂ.ಇ. ಸಂಸ್ಥೆಯ ಅಬ್ದುಲ್ ಕಲಾಮ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಬಿ.ಎ. 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ವರದಿ ಮೌಲ್ಯಮಾಪನ ಕಾರ್ಯದ ಬಾಹ್ಯ ಪರೀವೀಕ್ಷಕರಾಗಿ ಮಾತನಾಡುತ್ತ, ಏಕದೇವತಾವಾದ ಮತ್ತು ಅಲ್ಲಾಹನ ಸೃಷ್ಟಿಯ ಅನಂತತೆಯನ್ನು ಆಧರಿಸಿರುವ ಇಸ್ಲಾಂ ಧರ್ಮದ ಕಟ್ಟಡಗಳ ವಾಸ್ತುಕಲೆಯಲ್ಲಿ ಬಳಸಿರುವ ಮಿಹ್ರಾಬ್, ಕಿಬ್ಲಾ, ಕಮಾನುಗಳು, ಗುಮ್ಮಟಗಳು, ಮಿನಾರಗಳು, ಹೂವಿನ ವಿನ್ಯಾಸಗಳು, ಬಹುಭಜಕಗಳಂತ ಜ್ಯಾಮಿತೀಯ ಮಾದರಿಗಳು ಇಸ್ಲಾಂ ತತ್ವ-ಸಿದ್ಧಾಂತಗಳು, ಆಚಾರ-ವಿಚಾರಗಳು, ನಂಬುಗೆ-ಸಂಪ್ರದಾಯಗಳನ್ನು ಪ್ರತಿನಿಧಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇತಿಹಾಸ ವಿಭಾಗದ ಉಪನ್ಯಾಸಕಿ ರಾಜೇಶ್ವರಿ ಬಾರಕೇರ ಪ್ರಾಸ್ತಾವಿಕವಾಗಿ ಮಾತನಾಡುತ್ತ ಇಸ್ಲಾಂ ವಾಸ್ತುಕಲೆಯು ಕಲಾತ್ಮಕತೆ, ವೈಜ್ಞಾನಿಕತೆ, ಸಾಂಸ್ಕೃತಿಕ ಮೌಲ್ಯಗಳ ಸಮನ್ವಯವಾಗಿದ್ದು, ವಿವಿಧ ಸಂಸ್ಕೃತಿಗಳ ನಡುವೆ ಸೌಹಾರ್ದತೆ ಮತ್ತು ಸೃಜನಶೀಲತೆಯ ಸೇತುವೆಯಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳುತ್ತ, ವಿದ್ಯಾರ್ಥಿಗಳು ಕ್ಷೇತ್ರಕಾರ್ಯ ವಿಧಾನದ ಅಧ್ಯಯನ ಮೈಗೂಡಿಸಿಕೊಂಡಾಗ ಮಾತ್ರ ಶಿಸ್ತುಬದ್ಧ ಅಧ್ಯಯನ ಸಾಧ್ಯವೆಂದು ಹೇಳಿದರು. ಪ್ರಾಚಾರ್ಯ ಎಸ್.ಎಚ್. ಬಡೇಖಾನ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಸಾಮಾನ್ಯವಾಗಿ ಪಾರಂಪರಿಕ ಧಾರ್ಮಿಕ ಕಟ್ಟಡಗಳು ಆಯಾ ಧರ್ಮಗಳ ತಾತ್ವಿಕ-ಧಾರ್ಮಿಕ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ನಿರ್ಮಾಣವಾಗಿದ್ದು, ಆ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳದೆ ಅಧ್ಯಯನದಲ್ಲಿ ನಿರತರಾದರೆ ಆ ಅಧ್ಯಯನಗಳು ಕೇವಲ ಭೌತಿಕ ವಿವರಣೆಗೆ ಸೀಮಿತವಾಗುತ್ತವೆ. ತಾತ್ವಿಕ-ಧಾರ್ಮಿಕ ಪರಿಕಲ್ಪನೆಯನ್ನು ಮನನ ಮಾಡಿಕೊಂಡು ಪಾರಂಪರಿಕ ಧಾರ್ಮಿಕ ಕಟ್ಟಡಗಳ ಅಧ್ಯಯನ ಕೈಗೊಂಡಾಗ ಮಾತ್ರ ಕೂಲಂಕಷ ತಲಸ್ಪರ್ಶಿ ವಸ್ತುನಿಷ್ಠ ಬೌದ್ಧಿಕ ಅಧ್ಯಯನ ಸಾಧ್ಯವೆಂದು ಹೇಳಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಸವಿತಾ ಆರಾಧ್ಯಮಠ ವಂದನಾರೆ್ಣಗೈದರು. ಕನ್ನಡ ಉಪನ್ಯಾಸಕಿ ಕವಿತಾ ಅಜನಾಳ ಕಾರ್ಯಕ್ರಮ ನಡೆಸಿಕೊಟ್ಟರು. ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 