ದಿ!! ಪ್ರಭಾಕರ ಬಗಲಿಯವರ ಗ್ರಂಥ ಬಿಡುಗಡೆಗೊಳಸಿದ: ಯತ್ನಾಳ್

ದಿ!! ಪ್ರಭಾಕರ ಬಗಲಿಯವರ ಗ್ರಂಥ ಬಿಡುಗಡೆಗೊಳಸಿದ: ಯತ್ನಾಳ್ The!! Prabhakar Bagali's book released: Yatnal

ಲೋಕದರ್ಶನ ವರದಿ  

ಇಂಡಿ 03 :  ನಗರದ ಶಾಂತೇಶ್ವರ ವಿದ್ಯಾವರ್ಧಕ ಸಂಘ ಇಂಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ.ಪ್ರಭಾಕರ ಸಾತಗೌಡ ಬಗಲಿ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಜ್ಞಾನ ಪ್ರಭೆ ದಿ.ಪ್ರಭಾಕರ ಸಾ ಬಗಲಿ ಯವರ ಬದುಕು ಹಾಗೂ ಸಾಧನೆಯ ನೈಜ್ಯ ಚಿತ್ರಣದ ಸಂಸ್ಮರಣಾ ಗ್ರಂಥ ಲೋಕಾರೆ​‍್ಣ ಸಮಾರಂಭವನ್ನು ಕೇಂದ್ರದ ಮಾಜಿ ಸಚಿವರು ಹಾಗೂ ವಿಜಯಪೂರ ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೆರವೇರಿಸುವರು. ನಂತರ ಮಾತನಾಡಿದ ಅವರು ಇಂಡಿ ನಗರದಲ್ಲಿ ಇರುವ ಶಾಂತೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಘದ ಬೆಳವಣಿಗೆಯಲ್ಲಿ ಬಗಲಿ ಯವರ ಮನೆತದವರ ಹಾಗೂ ದಿ.ಪ್ರಭಾಕರ ಬಗಲಿ ಯವರ ಕೊಡಿಗೆ ಅಪಾರವಾದದ್ದು ಅವರು ಅಷ್ಟೇ ನಿಷ್ಠುರವಾಗಿದ್ದರು ಅಂತಹ ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡಿರುವು ತುಂಬಾ ನೋವಿನ ಸಂಗತಿ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಂಕರಗೌಡ ಪಾಟೀಲ ಅವರು ಮಾತನಾಡಿ ಬದುಕಿನಲ್ಲಿ ಕೆಲವು ಜನರಲ್ಲಿ ವಿಶ್ವಾಸದಿಂದ ನಂಬಿಕೆ ಇಟ್ಟು ಮುಂದೆ ಸಾಗುತ್ತವೆ ಅಂತಹವರಲ್ಲಿ ದಿ.ಪ್ರಭಾಕರ ಬಗಲಿಯವರದು. ನನ್ನ ಮತ್ತು ದಿ.ಪ್ರಭಾಕರ ಬಾಗಲಿ ಅವರ ಸಂಬಂಧ ಬಹಳ ಹಳೆಯದು ಎಂದು ಹೇಳಿದರು. ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ ಇಂಡಿ ತಾಲೂಕಿನ ಶೈಕ್ಷಣಿಕ ಇತಿಹಾಸದಲ್ಲಿ ಅಗ್ರಸ್ಥಾನದಲ್ಲಿರುವ ಶಾಂತಿಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ತಮ್ಮ ಜೀವನದ ಬಹು ಭಾಗಗಳವನ್ನು ಸಂಸ್ಥೆಗಾಗಿ ಕಳೆದ ದಿವಂಗತ ಪ್ರಭಾಕರ್ ಬಗಲಿ ಅವರು ಒಳ್ಳೆಯ ಧಾರ್ಮಿಕ ಆಚರಣೆಗಳನ್ನು ತಾವು ಸ್ವತಹ ಮೈಗೂಡಿಸಿಕೊಂಡಿದ್ದರು. ಇಂಥವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಅವರ ಕುರಿತು ಗ್ರಂಥ ಲೋಕಾರೆ​‍್ಣ ಮಾಡಿದ್ದು ತುಂಬಾ ಸಂತೋಷ ಎಂದು ಹೇಳಿದರು.

ಯರನಾಳದ ಸಂಗನಬಸವ ಮಾಹಾಶಿವಯೋಗಿಗಳು. ಆಲಮೇಲ ವಿರಕ್ತಮಠದ ಪೂಜ್ಯ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಸೇರಿದಂತೆ ಅನೇಕರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ದಯಸಾಗರ ಪಾಟೀಲ, ಖ್ಯಾತ ವೈದ್ಯರಾದ ನೀತಿನ ಠೀಕ್ಕಾರಿ, ಎಮ್ ಆರ್ ಪಾಟೀಲ್ ಎಂ ಎಸ್ ರುದ್ರಗೌಡರ ಚಂದ್ರಶೇಖರ ಎಸ್ ಪಾಟೀಲ ದೀಪಕ್ ದೋಶಿ ಡಾ ಆದರ್ಶ್‌ ಪ್ರಭಾಕರ ಬಗಲಿ ಮಂಜುನಾಥ ವಂದಾಲ ಜಗದೀಶ್ ಕ್ಷೇತ್ರಿ ಜೇಟ್ಟಪ ರವಳಿ ಶಾಂತುಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ನೀಲಕಂಠಗೌಡ ಪಾಟೀಲ ವಹಿಸಿದ್ದರು.ಈ ಕಾರ್ಯಕ್ರಮವನ್ನು ಶಾಂತೇಶ್ವರ ಪ್ರೌಢ ಶಾಲೆಯ ಪ್ರಾಂಶುಪಾಲರಾದ ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.