ಚಾಮರಾಜನಗರ, ಜ 28 : ವನ್ಯಜೀವಿ ಕುರಿತ ಸಾಕ್ಷ್ಯ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್
ಹಾಗೂ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ನಡೆಸಿಕೊಡುವ ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರೀಲ್ಸ್ ಬಂಡಿಪುರ ಹುಲಿ ಅಭಯಾರಣ್ಯ ಕ್ಕೆ ಬಂದಿಳಿದಿದ್ದಾರೆ.
ಬೆನಿಜಾಯ್ ಏಷ್ಯಾ ಗ್ರೂಪ್ ನ ಸೆವೆನ್ ಟಾರಸ್ ಸ್ಟುಡಿಯೋ ಚಮನಹಳ್ಳಿಯಲ್ಲಿ ಈ ಸಾಕ್ಷ್ಯಚಿತ್ರ ತಯಾರಿಸುತ್ತಿದೆ.
ಬಂಡೀಪುರ ಹುಲಿ ಅರಣ್ಯದಲ್ಲಿ ಚಿತ್ರೀಕರಣ ನಡೆಸಲು ಅರಣ್ಯ ಇಲಾಖೆ ಜೊತೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.
ಜ.27ರಂದು ಅರ್ಧ ದಿನ ಹಾಗೂ ಜ 28 ಬೆ.10 ರಿಂದ ಸಂಜೆ 6 ಗಂಟೆವರೆಗೆ. ಜ 29 ರಂದು ಅರ್ಧ ದಿನ ಚಿತ್ರೀಕರಣ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡಿದ್ದು, ಹಲವು ಷರತ್ತುಗಳನ್ನು ವಿಧಿಸಿದೆ.
ನಿರ್ದೇಶಕ ಬೇಲ್‍ಗ್ರೆಸ್, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಚಿತ್ರೀಕರಣಕ್ಕೆ 17 ಷರತ್ತು ವಿಧಿಸಲಾಗಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ಜಾಗೃತಿ ವಹಿಸಲುವಂತೆ ಸೂಚಿಸಲಾಗಿದೆ.
ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿತ್ರಿಕರಣ ನಡೆಯಲಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಗಮಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು, ಸೋಮವಾರ ಹೆಲಿಕಾಪ್ಟರ್ ಮೂಲಕ ರಜನಿಕಾಂತ್ ಬಂಡಿಪುರಕ್ಕೆ ಬಂದಿಳಿದಿದ್ದಾರೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಬೇರ್ ಗ್ರಿಲ್ಸ್, ಉತ್ತರಾಖಂಡ್ನ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ನಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 12ರಂದು ಈ ಕಾರ್ಯಕ್ರಮ ಪ್ರಸಾರವಾಗಿತ್ತು.