ರಾಣೇಬೆನ್ನೂರು 11 : ನಮ್ಮ ದೇಶದ ಯೋಧರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದ್ದನ್ನು ನಗರದ ಸ್ವಕುಳಸಾಳಿ ಸಮಾಜ ಅತ್ಯಂತ ಗೌರವದಿಂದ ಅಭಿನಂದಿಸುತ್ತದೆ.
ದೇಶದಲ್ಲಿ ಶಾಂತಿ ಕದಡುವ ಉಗ್ರರ ತರಬೇತಿ ಕೇಂದ್ರಗಳ ನಾಶ ಮಾಡಿ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಮತ್ತು ಮುಂದೆ ನೆಡೆಯುವ ಎಲ್ಲಾ ಸೈನಿಕ ಕಾರ್ಯಚರಣೆಗಳು ಸಂಪೂರ್ಣವಾಗಿ ಯಶಸ್ವಿಯಾಗಲಿ ಎಂದು ದೇವಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಇದಲ್ಲದೆ ನಮ್ಮ ಸೈನಿಕರಿಗೆ ಹೆಚ್ಚಿನ ಶಕ್ತಿ, ಸಾಮರ್ಥ್ಯ ಭಗವಂತ ದಯಪಾಲಿಸಲು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ದೇಶದ ಬಾರ್ಡ್ ರನಲ್ಲಿ ಇರುವ ನಾಗರಿಕರ ಹಾಗೂ ಯೋಧರ ಸುರಕ್ಷತೆಗಾಗಿ ತುಳುಜಭವಾನಿ ಮಾತೆಯ ಆಶೀರ್ವಾದಕ್ಕಾಗಿ ಸಮಾಜದ ಎಲ್ಲರೂ ಬೇಡಿಕೊಂಡರು.
ಸಮಾಜದ ಯೋಗೇಶ್ ದೊತ್ರೆ, ನೀಲಕಂಠಪ್ಪ ರೋಖಡೆ, ಕರಬಸಪ್ಪ ಏಕಬೋಟೆ, ದೇವೇಂದ್ರ ರೋಖಡೆ, ಪರುಶುರಾಮ ರೋಖಡೆ, ಶ್ರೀನಿವಾಸ ಪಾಣಿಭಾತೆ, ಧೀರೇಂದ್ರ ಏಕಬೋಟೆ ಹಾಗೂ ಮಹಿಳಾ ಮಂಡಳದ ಶ್ರೀಮತಿ ರಾಜೇಶ್ವರಿ ಏಕಬೋಟೆ, ಶಾಂತಲಕ್ಷ್ಮೀ ರೋಖಡೆ, ವಿನೋದಿನಿ ರೋಖಡೆ, ವೈಶಾಲಿ ಪಾಣಿಭಾತೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.