ಹುಬ್ಬಳ್ಳಿ 11: ಬಸವ ಕೇಂದ್ರದ ವತಿಯಿಂದ ಬಸವ ಜಯಂತಿಯ ಪ್ರಯುಕ್ತ ಶರಣ ದರ್ಶನ ಪ್ರವಚನಗಳು ಮಾಲಿಕೆಯ ಶರಣ ಹಾವಿನಹಾಳ ಕಲ್ಲಯ್ಯನವರು ಕುರಿತು ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗ್ರಂಥಪಾಲಕರಾದ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯದ ಅಭಿವೃದ್ದಿಗೆ ಶ್ರೇಷ್ಠ ಕೊಡುಗೆ ನೀಡಿರುವ ಹಲವಾರು ವಚನ ಸಾಹಿತ್ಯ ಕೃತಿಗಳನ್ನು ರಚಿಸಿರುವ, 94 ವರ್ಷದ ಹಿರಿಯ ಸಾಹಿತಿ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಆರ್.ಗುಂಜಾಳ ಅವರನ್ನು ಬಸವ ಕೇಂದ್ರದ ವತಿಯಿಂದ ಹುತ್ಪೂರ್ವಕವಾಗಿ ಗೌರವಿಸಲಾಯಿತು.
ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಕಾರ್ಯದರ್ಶಿ ಡಾ. ಪ್ರಕಾಶ ಮುನ್ನೋಳಿ, ಕಾರ್ಯಾಧ್ಯಕ್ಷ ಪ್ರೊಎಸ್.ವಿ.ಪಟ್ಟಣಶೆಟ್ಟಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ ಗ್ರಂಥಪಾಲಕಡಾ. ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿಯ ಶಾಲೆಯಅಧ್ಯಕ್ಷಎಸ್.ವಿ.ಕೊಟಗಿ, ಬಸವರಾಜ ಲಿಂಗಶೆಟ್ಟರ,ಕೆ.ಎಸ್.ಇನಾಮತಿ, ಎಂ.ಬಿ.ಕಟ್ಟಿ, ಪ್ರಭುಅಂಗಡಿ, ಶಿವಾನಂದ ಬೆನ್ನಾಳೆ, ಮುಂತಾದವರು ಉಪಸ್ಥಿತರಿದ್ದರು.