ಗುಣಾತ್ಮಕ ಶಿಕ್ಷಣವನ್ನು ನೀಡಲು ಶಿಕ್ಷಕರು ಮುಂದಾಗಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ಅಲಗೂರ

ಗುಣಾತ್ಮಕ ಶಿಕ್ಷಣವನ್ನು ನೀಡಲು ಶಿಕ್ಷಕರು ಮುಂದಾಗಬೇಕು: ಕ್ಷೇತ್ರ ಶಿಕ್ಷಣಾಧಿಕಾರಿ ಅಲಗೂರ Teachers should take the initiative to provide quality education: Field Education Officer Alagur

ದೇವರಹಿಪ್ಪರಗಿ 01 : ಸರಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ,ಮಧ್ಯಾಹ್ನ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ ಸೇರಿದಂತೆ ಹತ್ತು ಹಲವಾರು ಯೋಜನೆಗಳಲ್ಲಿ ಜಾರಿಗೊಳಿಸಿದ್ದು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವುದರೊಂದಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಲು ಶಿಕ್ಷಕರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್‌.ಆಲಗೂರ ಹೇಳಿದರು.ಪಟ್ಟಣದ ಹೊಸನಗರದ ಸರ್ಕಾರಿ ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಅವರು,ಎಲ್ಲಾ ಶಾಲಾ ಕೋಣೆಗಳನ್ನು ಅಲಂಕರಿಸಿ,ರಂಗೋಲಿ,ತಳಿರುತೋರಣ ಕಟ್ಟಿ,ಆರತಿ ಬೆಳಗಿ,ಡೊಳ್ಳು ಬಾರಿಸುವ ಮೂಲಕ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. 

ಅಕ್ಷರ  ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅರವಿಂದ. ಡೋಣೂರ,ಶಿಕ್ಷಣ ಸಂಯೋಜಕ ಎಸ್‌.ಎಮ್‌.ಕಪನಿಂಬರಗಿ ಮಾತನಾಡಿದರು. ಶಿಕ್ಷಕರ ಸಂಘದ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಎ.ಎಚ್‌.ವಾಲೀಕಾರ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮೀದೇವಿ ಬಿರಾದಾರ ನಿರೂಪಿಸಿದರು.ಶಿಕ್ಷಕ ಬಿ.ಎಸ್‌.ಗೊಬ್ಬೂರ ವಂದಿಸಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಮಾತೆ ಗುರುಬಾಯಿ.ಎಸ್,ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ಹಾಜಿಲಾಲ ಮಸಳಿ,ಉಪಾಧ್ಯಕ್ಷೆ ಗಾಯತ್ರಿ ಬಿರಾದಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಫೀರೋಜ್ ಕಾಚೂರ,ಸಮೂಹ ಸಂಪನ್ಮೂಲ ವ್ಯಕ್ತಿ ವಿಜಯಲಕ್ಷ್ಮಿ ನವಲಿ, ಶಿವರಾಯ ಮಸಬಿನಾಳ, ಭೀಮನಗೌಡ ಬಿರಾದಾರ, ಬಸವರಾಜ ಕೊರಬು, ಮಹ್ಮದರಫೀಕ ಮಳಖೇಡ, ಅಬ್ದುಲ ವಾಲೀಕಾರ, ಸಲೀಂ ಮನಿಯಾರ, ಜೆ.ಎಮ್‌.ಬಡಿಗೇರ, ಗಂಗಾಂಬಿಕೆ ಗಚ್ಚಿನಮಠ, ಪ್ರೀತಾ ಪಿಜೆ,ಶಿವಶರಣ ಪೂಜಾರಿ, ವೈ.ಎಮ್‌.ಅತ್ತಾರ,ನಾಗಮ್ಮ ಅಲ್ದಿ ಸೇರಿದಂತೆ ಎಸ್‌.ಡಿ.ಎಮ್‌.ಸಿ ಸದಸ್ಯರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.