ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಟಾಲೆಂಟ್ ಸರ್ಚ್ ಪರೀಕ್ಷೆ
Talent Search Exam for SSLC students
ತಾಳಿಕೋಟಿ: ಪಟ್ಟಣದ ಪ್ರತಿಷ್ಠಿತ ಎಸ್.ಎಸ್.ವಿದ್ಯಾಸಂಸ್ಥೆಯ ಎಚ್.ಎಸ್.ಪಾಟೀಲ ವಿಜ್ಞಾನ ಮಹಾವಿದ್ಯಾಲಯದ ಮಾಸ್ಟರ್ ಮೈಂಡ್ ಅಕಾಡೆಮಿಯ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಪ್ರಯುಕ್ತ ತಾಳಿಕೋಟೆ ಹಾಗೂ ಸುತ್ತಮುತ್ತಲ ಊರುಗಳ ವಿವಿಧ ಪ್ರೌಢಶಾಲೆಯ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದರು. ಅದರಲ್ಲಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಈ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಮತ್ತು ಹಾಸ್ಟೆಲ್ ಸೌಲಭ್ಯವನ್ನು ಘೋಷಿಸಲಾಯಿತು. ನಾಲ್ಕನೇ ಸ್ಥಾನದಿಂದ ಹತ್ತನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ನೀಡುವುದಾಗಿ ಘೋಷಿಸಲಾಯಿತು. ಹತ್ತರಿಂದ ಐವತ್ತನೇ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ರಿಯಾಯಿತಿಯನ್ನು ನೀಡುವುದಾಗಿ ಕಾಲೇಜಿನ ಪ್ರಾಚಾರ್ಯರು ತಿಳಿಸಿದರು. ಉಪನ್ಯಾಸವನ್ನು ನೀಡಿದ ಶಿಕ್ಷಕ ಎಸ್.ವ್ಹಿ.ಜಾಮಗೊಂಡಿಯವರು ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಪಿ.ಯು.ಸಿ.ನಂತರ ಏನೆಲ್ಲ ಕಲಿಕಾ ಅವಕಾಶಗಳು ದೊರೆಯುತ್ತವೆ ಮತ್ತು ಉದ್ಯೋಗಾವಕಾಶಗಳು ಎಷ್ಟಿವೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಸಂಸ್ಥೆಯ ಅದ್ಯಕ್ಷ ಎಚ್.ಎಸ್.ಪಾಟೀಲರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೀವು ಉನ್ನತವಾದದ್ದನ್ನು ಸಾಧಿಸಬೇಕಾದರೆ ವಿಜ್ಞಾನ ವಿಷಯವು ನಿಮಗೆ ನೂರಾರು ಅವಕಾಶಗಳ ಬಾಗಿಲನ್ನು ತೆರೆಯುತ್ತದೆ. ನೀವು ದೇಶ ವಿದೇಶಗಳಲ್ಲಿ ವಿಫುಲವಾದ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಕಷ್ಟಪಟ್ಟರೆ ಸುಖ ಸಿಗುತ್ತದೆ. ಆದ್ದರಿಂದ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿರೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಮ್ಮ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಅದರ ಸದುಪಯೋಗವನ್ನು ಪಡೆದುಕೊಳ್ಳಿರೆಂದು ಹೇಳಿದರು. ಕಾಲೇಜಿನ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಮಕ್ಕಳಿಗೆ ನಾವು ಉತ್ತಮ ತರಬೇತಿ ನೀಡಿ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಗೊಳಿಸುತ್ತೇವೆಂದು ಭರವಸೆ ನೀಡಿದರು. ವೇದಿಕೆ ಮೇಲೆ ಎಚ್ ಎಸ್ ಪಾಟೀಲ್ ನ ಪ್ರಚಾರ್ಯರಾದ್ ಎಸ್ ಬಿ ಮಂಗ್ಯಾಳ, ಸಿದ್ದಾರ್ಥ್ ರಾಯರೆಡ್ಡಿ ಮುಖ್ಯ ಗುರುಗಳು ಅಶೋಕ್ ಕಟ್ಟಿ, ಜಗದೀಶ್ ಕೊಣ್ಣೂರ್ ಇದ್ದರು. ಶಿಕ್ಷಕ ಎಸ್.ಸಿ.ಗುಡಗುಂಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.ಉಪನ್ಯಾಸಕ ಶ್ರೀನಿವಾಸ ಇವರು ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 