ವಿದ್ಯಾರ್ಥಿಗಳು ಯಾವಾಗಲೂ ಆಶಾವಾದಿಗಳಾಗಿರಿ: ಪ್ರೊ. ಸಿದ್ಧಾಳ
Students should always be optimistic: Prof. Siddhal
ಮಾಂಜರಿ 09: ಇಂದಿನ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಹಾತ್ಮರಂತೆ ಆಗಲು ಪ್ರಯತ್ನಿಸಬೇಕೆಂದು ಮಹಾಲಿಂಗಪೂರದ ಕೆ.ಎಲ್.ಇ ಕಾಲೇಜಿನ ಉಪನ್ಯಾಸಕ ಪ್ರೊ. ಶಿವಲಿಂಗ ಸಿದ್ಧಾಳ ಹೇಳಿದರು.
ಅವರು ಬುಧವಾರರಂದು ಅಂಕಲಿಯ ಶಾರದಾದೇವಿ ಕೋರೆ ಸಂ. ಪ. ಪೂ. ಕಾಲೇಜಿನ 2025-26 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸ್ವಾಗತ. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಜೀವನಕ್ಕೆ ಗುರಿ ಇರಬೇಕು: ಗುರಿ ಇಲ್ಲದ ಜೀವನ ಬೋರ್ಡಿಲ್ಲದ ಬಸ್ಸಿನಂತಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಟಿ.ವಿ ಹಾಗೂ ಮೊಬೈಲ್‌ದಿಂದ ದೂರವಿದ್ದು ಸನ್ನಡತೆಯನ್ನು ರೂಢಿಸಿಕೊಂಡಿದ್ದರೆ ಸಮಾಜವೇ ನಿಮ್ಮನ್ನು ಗುರುತಿಸುತ್ತದೆ. ಬದುಕಿನಲ್ಲಿ ಯಾವಾಗಲೂ ಆಶಾವಾದಿಯಾಗಿರಬೇಕು. ಪ್ರತಿದಿನ ನಿಮ್ಮ ತಂದೆ-ತಾಯಿಗಳ ಪರಿಶ್ರಮ ನಿಮ್ಮ ಕಣ್ಣು ಮುಂದೆ ಬರುತ್ತಿದ್ದರೆ ನೀವೂ ಎಂದೂ ಕೆಟ್ಟದಾರಿಯನ್ನು ತುಳಿಯಲಾರಿರಿ ಎಂದು ಆನೇಕ ಮಾಹಾನ್ ಸಾಧಕರ ಬದುಕಿನ ಕಥೆಗಳನ್ನು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಸುರೇಶ ಪಾಟೀಲರು ಕೆ.ಎಲ್.ಇ ಸಂಸ್ಥೆ ಎಲ್ಲ ಸೌಕರ್ಯಗಳನ್ನು ನಿಮಗೆ ನೀಡಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬೇಕು. ನೀವು ಬರಿ ಮಾತನಾಡದೆ ನಿಮ್ಮ ಸಾಧನೆಗಳು ಮಾತನಾಡುವಂತಾಗಬೇಕೆಂದು ಕಿವಿ ಮಾತು ಹೇಳಿದರು.
ಪ್ರಾಚಾರ‌್ಯ ಪಿ. ಎನ್. ತಳವಾರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಸುಬ್ರಾವ್ ಎಂಟೆತ್ತಿನವರ, ವೈ. ಬಿ. ಮಾಚಕನೂರ ವೇದಿಕೆಯಲ್ಲಿದ್ದರು. ಆವರಣದ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕೆ. ಎಸ್. ಗುಡೋಡಗಿ ಪರಿಚಯಿಸಿದರು. ಎಸ್. ಕೆ. ಖೋತ ನಿರೂಪಿಸಿದರು. ಎನ್. ಎಸ್. ಅಮಟೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 