ರಾಜ್ಯಮಟ್ಟದ ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭ

ರಾಜ್ಯಮಟ್ಟದ ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭ  State-level Raja Ratna Award Ceremony

ಲೋಕದರ್ಶನ ವರದಿ 

ಹಾವೇರಿ 29: ಸಮಾಜ ಸೇವೆ,ಜನಸೇವೆ,ಮಾನವೀಯ ಮೌಲ್ಯಗಳ,ಸಮಾಜಮುಖಿ ಕಾರ್ಯಗಳ ಮೂಲಕ ಜನಸಾಮಾನ್ಯರ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ) ಅಧ್ಯಕ್ಷರಾದ ಉಡಚಪ್ಪ ಮಾಳಗಿ ಅವರಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ದೊರಕಿದೆ.

ಹೂವಿನಹಡಗಲಿಯಲ್ಲಿ  ಜರುಗಿದ 2026ನೇ ಸಾಲಿನ ಉದಯ ದಿಗಂತ ದಿನಪತ್ರಿಕೆಯ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ  ಉಡಚಪ್ಪ ಮಾಳಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ನೀಡಿದ ಪ್ರಧಾನ ಸಂಪಾದಕರಾದ ಬಿಚ್ಚುಗತ್ತಿ ಖಾಜಾ ಹುಸೇನ,ಕರ್ನಾಟಕ ಪ್ರೆಸ್ ಕ್ಲಬ್ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ದಯಾನಂದ ಎಂ,ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಹೆಚ್‌.ಜಿ,ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಸುರೇಶ ಅಂಗಡಿ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಪದಾಧಿಕಾರಿಗಳಿಗೆ ರಾಜ್ಯ ಮಟ್ಟದ ರಾಜರತ್ನ ಪ್ರಶಸ್ತಿ ಪುರಸ್ತೃತರಾದ ಉಡಚಪ್ಪ ಮಾಳಗಿ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹೂವಿನಹಡಗಲಿ ಮಲ್ಲನಕೆರೆ ಮಠದ ಶ್ರೀ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಗಳು,ಎಸ್‌.ಎಸ್‌.ಎಫ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಹಜರತ್ ಸುಫಿಯಾನ್ ಸಖಾಫಿ, ಬಾಲಯೇಸುವಿನ ದೇವಾಲಯದ ಮಠಾಧಿಪತಿಗಳಾದ ಫಾ ಸಲ್ವಿಕುಮಾರ, ಚೌಕಿಮಠದ ಶ್ರೀ ಸದ್ಗುರು ಗಾಡಿ ತಾತನವರು, ಬಳ್ಳಾರಿ-ವಿಜಯನಗರ ಜಿಲ್ಲೆಯ ಸಂಸದರಾದ ಈ. ತುಕಾರಾಮ, ಹುಡಾ ಅಧ್ಯಕ್ಷರಾದ ಇಮಾಮ್ ನಿಯಾಜ್,ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ಮರೋಳ ಮುಖಂಡರಾದ ಹನುಮಂತಪ್ಪ ಸಿ.ಡಿ,ಮಹೇಶಪ್ಪ ಹರಿಜನ,ಬಸವಣ್ಣೆಪ್ಪ ಅಳ್ಳಳ್ಳಿ ಸೇರಿದಂತೆ ಗಣ್ಯರು ಹಾಗೂ ಸಮಾರಂಭದ ಆಯೋಜಕರು ಪಾಲ್ಗೊಂಡಿದ್ದರು.