ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಶಾಲಾ ಆರಂಭೋತ್ಸವಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು : ಜಗದೀಶ ಪೂಜಾರ

ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಶಾಲಾ ಆರಂಭೋತ್ಸವಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು : ಜಗದೀಶ ಪೂಜಾರ  Sri Durgadevi Education Committee's school opening ceremony: Children should be given education alon

ಗದಗ 03 :  ಇಂದಿನ ಮಕ್ಕಳಿಗೆ  ಸೌಕರ್ಯಗಳಿಗಿಂತ  ಶಿಕ್ಷಣ ಮತ್ತು ಸಂಸ್ಕಾರ ನೀಡುವದು ಮುಖ್ಯವಾಗಿದೆ ಎಂದು ರತ್ನಾಕರವಾಣಿ ದಿನಪತ್ರಿಕೆಯ ಸಂಪಾದಕರಾದ ಜಗದೀಶ ಪೂಜಾರ ಅವರು ಹೇಳಿದರು.  ನಗರದ ಗಂಗಾಪೂರ ಪೇಟೆಯಲ್ಲಿರುವ   ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೆನ್ಸಿಲ್, ಸಿಹಿ ವಿತರಿಸಿ ಮತ್ತು ಸನ್ಮಾನ ಸ್ವೀಕರಿಸಿ  ಮಾತನಾಡಿ, ಇಂದು ಮಕ್ಕಳಿಗೆ ಸಂಸ್ಕಾರದ ಕೊರತೆಯಿಂದಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಮತ್ತು ಗುರು-ಹಿರಿಯರಿಗೆ ಗೌರವ ನೀಡದಿರುವುದು ಮುಖ್ಯ ಕಾರಣವಾಗಿದೆ. ಆದರೆ, ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ನೀಡಿರುವ ಸಂಸ್ಕಾರ ಮತ್ತು ಶಿಕ್ಷಣ ನೋಡಿ ಸಂತಸವಾಗಿದೆ.

ಇದೇರೀತಿ ಪ್ರತಿ ಮನೆ ಮತ್ತು ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ಎಂದು ಜಗದೀಶ ಪೂಜಾರ ಅವರು ಹೇಳಿದರು. ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವದು ಅಷ್ಟು ಸುಲಭವಾದ ಕೆಲಸವಲ್ಲ, ಒಂದು ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ  ಕಾರ್ಯನಿರ್ವಹಿಸಬೇಕಾದರೆ  ಪಾಲಕರ ಮತ್ತು ಶಿಕ್ಷಕರ ಸಹಕಾರ ಬಹಳ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು  ತನ್ನ ಸ್ವಂತ ಜಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿ  ಬಡ ಮಕ್ಕಳಿಗೆ ಪದವಿ ವರೆಗೂ  ಶಿಕ್ಷಣದ ಸೇವೆ ನೀಡಲಿ,  ಈ ಸಂಸ್ಥೆಯ ಅಭಿವೃದ್ದಿಗೆ ನಾನು ಕೂಡಾ ಸದಾ ಬೆನ್ನೆಲಬಾಗಿ ನಿಂತು ಸಹಾಯ, ಸಹಕಾರ ನೀಡುತ್ತೆನೆ ಎಂದು ಭರವಸೆ ನೀಡಿದರು.  

 ಇದೇ ಸಂದರ್ಭದಲ್ಲಿ ಶ್ರೀ ದುರ್ಗಾದೇವಿ  ಶಿಕ್ಷಣ ಸಮಿತಿಯ ಅಧ್ಯಕ್ಷರಾದ ವೆಂಕಟೇಶ ಇಮರಾಪೂರ, ಕಾರ್ಯದರ್ಶಿಗಳಾದ ಕವಿತಾ ಇಮರಾಪೂರ, ನಿರ್ದೇಶಕರಾದ ಮೋಹನ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಚನ್ನಬಸಮ್ಮ ಹಾಳಕೇರಿ, ಆಡಳಿತಾಧಿಕಾರಿ ಸಾವಿತ್ರಿ ಕವಡಕಿ,  ಮುಖ್ಯೋಪಾದ್ಯಾಯನಿ ಎಚ್‌.ಎಂ. ನದಾಫ್, ಸಹ ಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ವಂದನಾ ಕಲ್ಮನಿ, ಶೋಭಾ ಸಂಬರಗಿಮಠ, ಸಿಬ್ಬಂದಿ ಲಕ್ಷ್ಮೀ ಕಮಡೊಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.  ಇದಕ್ಕೂ ಮುನ್ನ ಶಾಲಾ ಮಕ್ಕಳಿಗೆ  ಗುಲಾಬಿ ಹೂವು ನೀಡಿ, ಪುಷ್ಪಾರ್ಚನೆ ಮಾಡಿ, ಹಣೆಗೆ ತಿಲಕವನ್ನಿಟ್ಟು, ಆರತಿ ಮಾಡಿ ಸಿಹಿ ನೀಡುವದರೊಂದಿಗೆ  ಮಕ್ಕಳನ್ನು ಆತ್ಮೀಯವಾಗಿ  ಬರಮಾಡಿಕೊಳ್ಳಲಾಯಿತು.