ಜೂನ್ 30 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ಜೂನ್ 30 ರಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ  Special comprehensive revision of voter list from June 30

ಚಡಚಣ 12 : ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಯ ಬಿ.ಎಲ್‌.ಓ. ತರಬೇತಿ ಪ್ರಕ್ರಿಯೆಯು ಜೂನ್ 20 ರಿಂದ ಪ್ರಾರಂಭವಾಗಲಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವು ಜೂನ್ 30ರಿಂದ ಆರಂಭವಾಗಿ ಜುಲೈ 29ರವರೆಗೆ ನಡೆಯಲಿದೆ.  ತಾಲೂಕಿನಲ್ಲಿ 2002ರ ಮತಾದರರ ಪಟ್ಟಿ ಹಾಗೂ 2026ರ ಮತದಾರರ ಪಟ್ಟಿಯ ಮತದಾರರ ಮ್ಯಾಪಿಂಗ್ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ತಾಲೂಕಿನ ಈ ಕಾರ್ಯಕ್ಕೆ ತಾಲೂಕು ಮತದಾರರು ಸಹಕರಿಸಬೇಕು ಎಂದು ತಹಶೀಲ್ದಾರ ಸಂಜಯ ಇಂಗಳೆ ಮನವಿ ಮಾಡಿದರು. 

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದಿಂದ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯಂತೆ ಚಡಚಣ ತಾಲೂಕಿನಲ್ಲಿ ಜೂ. 20ರಂದು ಮತದಾರರ ಪಟ್ಟಿ ಶುದ್ಧಗೊಳಿಸಲು ಅಧಿಕಾರಿಗಳಿಗೆ ತರಬೇತಿ ನೀಡುವುದು. ಜೂ. 30ರಿಂದ ಜು. 29ರ ವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ತೆರಳಿ, ಅನುಬಂಧ ನಮೂನೆ -3 (ಎನೊಮೊರೇಶನ್) ನೀಡಿ, ಆಯೋಗ ಸೂಚಿಸಿದ 12 ದಾಖಲೆಗಳಲ್ಲಿ ಸಂಬಂಧೀಸಿದ ದಾಖಲೆಗಳನ್ನು ಪಡೆಯುವುದು. ದಾಖಲೆ ಸ್ವೀಕರಿಸಲು ಮನೆಗಳಿಗೆ ಭೇಟಿ ನೀಡಬೇಕು ಎಂದರು.  

 ಅ.5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅ.5 ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ, ತಕರಾರು ಇದ್ದರೆ ತಕರಾರು ಸಲ್ಲಿಸಬಹುದು.   1987ರಲ್ಲಿ ಜನಿಸಿದವರು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾದಲ್ಲಿ 1 ದಾಖಲಾತಿ ಅಂದರೆ ತಮ್ಮ ಯಾವೂದಾರೂ ಆಧಾರಕಾರ್ಡ, ಪ್ಯಾನ್ಕಾರ್ಡ, ಅಥವಾ ಯಾವುದಾದರು ಒಂದು ದಾಖಲಾತಿಯನ್ನು ನೀಡಬೇಕು. 1987ರಿಂದ 2004ರ ವರೆಗೆ ಜನಿಸಿದವರು ಅವರ ದಾಖಲಾತಿ ಹಾಗೂ ತಂದೆ ಅಥವಾ ತಾಯಿಯ ಎಪಿಕ್ ಕಾರ್ಡ ನೀಡಬೇಕು. 2004ನಂತರ ಜನಿಸಿದವರು ತಂದೆ, ತಾಯಿ ಮತ್ತು ತಮ್ಮ ಯಾವುದಾದರೊಂದು ದಾಖಲಾತಿ ನೀಡಬೇಕು ಎಂದ ಅವರು, ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರೆ​‍್ಡ ಕುರಿತು ಅರ್ಜಿ ಸಲ್ಲಿಸಬಹುದು.   

ಪ್ರತಿ 25 ವರ್ಷಕ್ಕೊಮ್ಮೆ ನಡೆಯುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಇದಾಗಿದ್ದು, ಇದರಿಂದ ಯಾವುದೇ ರೀತಿಯ ಮತದಾರರ ಹೆಸರು ಕಡಿತಗೊಳಿಸುವದಿಲ್ಲ. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಕೈಜೋಡಿಸಿ. ಸಮಸ್ಯೆಗಳಿದ್ದರೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಕಚೇರಿಗೆ ಭೇಟಿ ನೀಡಿ ಎಂದು ಹೇಳಿದರು. ಸಂದರ್ಭದಲ್ಲಿ ಕಂದಾಯ ಇಲಾಖೆಯ ಶಿರಸ್ತೇದಾರ ಆರಿ​‍್ಪ.ಹಡಪದ, ವಿಷಯ ಕಾರ್ಯನಿರ್ವಾಹಕ ಸಂತೋಷ ನಾಯಕ, ಕಾಂತುಗೌಡ ಪಾಟೀಲ, ಆರಿ​‍್ಡ. ಹಕ್ಕೆ, ಭೀಮಾಶಂಕರ ವಾಳಿಖಿಂಡಿ ಸೇರಿದಂತೆ ಇತರರು ಇದ್ದರು.