ಸಮಾಜಸೇವಕ ಅಬ್ದುಲಖಾದರ ಧಾರವಾಡರಿಗೆ ಆರ್ಟಿಒ ವತಿಯಿಂದ ಸನ್ಮಾನ

ಸಮಾಜಸೇವಕ ಅಬ್ದುಲಖಾದರ ಧಾರವಾಡರಿಗೆ ಆರ್ಟಿಒ ವತಿಯಿಂದ ಸನ್ಮಾನ  Social worker Abdulkhadar Dharwad honored by RTO

ಲೋಕದರ್ಶನ ವರದಿ 

ಹಾವೇರಿ 28: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು,ಅನಾಥರನ್ನು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗೆ ಸೇರಿಸುವ ನಿಸ್ವಾರ್ಥ ಸೇವೆ ಮಾಡುತ್ತಿರುವ ನಗರದ ನಿವಾಸಿ,ಸಮಾಜ ಸೇವಕರಾದ ಅಬ್ದುಲಖಾದರ ಹಜರತಸಾಬ ಧಾರವಾಡ ಅವರಿಗೆ ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಅಭಿನಂದನಾ ಪತ್ರ ನೀಡಿ,ಗೌರವಿಸಿ ಸನ್ಮಾನಿಸಲಾಯಿತು. ಅಬ್ದುಲಖಾದರ ಧಾರವಾಡ ಅವರು ಸುಮಾರು 11 ವರ್ಷಗಳಿಂದ ಸೇವೆಯೇ ಪರಮ ಧರ್ಮ ಎಂಬ ಧ್ಯೇಯದೊಂದಿಗೆ ಈ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಮಾನವೀಯತೆಯ ಕೆಲಸಕ್ಕೆ ಪ್ರೋತ್ಸಾಹಕವಾಗಿ ಅವರ ಸೇವೆ ಇನ್ನೂ ಮುಂದುವರಿಯಲಿ ಹಾಗೂ ಇನ್ನೂ ಹೆಚ್ಚು ಪ್ರಶಸ್ತಿ ಗೌರವ ಸಿಗಲಿ ಎಂದು ಆರ್‌ಟಿಓ ಕಛೇರಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕು.ವಿನಯ ಕಾಟೋಕರ್ ಆರ್, ಸಿಬ್ಬಂದಿಗಳಾದ ಶ್ರೀಪಾದ ಬ್ಯಾಶಿಯವರ,ಮೆಹಬೂಬಲಿ ಹೊಟೆಗಾಶಿ, ಶಂಭುಲಿಂಗಯ್ಯ  ಹೊಸಳ್ಳಿಮಠ ಇದ್ದರು.