ಸಮಾಜಕಾರ್ಯ ಶಿಬಿರವು ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುತ್ತದೆ : ಶಾಂತಾರಾಮ್ ಸಿದ್ದಿ
Social work camp emphasizes personality development: Shantaram Siddi
ಲೋಕದರ್ಶನ ವರದಿ
ಮುಂಡಗೋಡ, 09 : ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಬಹು ಮುಖ್ಯವಾದ ಅಂಶವಾಗಿದೆ. ಜೀವನದಲ್ಲಿ ಕಷ್ಟವನ್ನು ಅನುಭವಿಸಿದವರು ಗೆಲುವನ್ನು ಸಾಧಿಸುತ್ತಾರೆ, ಹಾಗೂ ಸಮಾಜ ಕಾರ್ಯ ಶಿಬಿರದ ಮಹತ್ವವು ಬುಡಕಟ್ಟು ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಅರಿವುಗಳನ್ನು ತಿಳಿಯಲು ಇದು ಒಂದು ಸುಸಂದರ್ಭ ಎಂದು ವಿಧಾನ ಪರಿಷತ್ ಸದಸ್ಯ ರಾದ್ ಶಾಂತರಾಮ್ ಸಿದ್ದಿ ತಿಳಿಸಿದರು.ನಾಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪಗೇರಿ ಗ್ರಾಮದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಸ್ಕೋಡ್ ವೇಸ್ ಸಂಸ್ಥೆ ಶಿರಸಿ ಇವರ ಸಹಯೋಗದಲ್ಲಿ ನಡೆದ ಸಮಾಜಕಾರ್ಯ ಗ್ರಾಮೀಣ ಶಿಬಿರ 2025 26 ಬುಡಕಟ್ಟು ಸಮುದಾಯ ಮತ್ತು ಸಂಶೋಧನೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ವೆಂಕಟೇಶ್ ನಾಯಕ್ ಅವರು ಮಾತನಾಡಿ ಸಮಾಜ ಕಾರ್ಯ ಶಿಬಿರವು ಕೇವಲ ಮನರಂಜನೆಯ ಶಿಬಿರವಲ್ಲ ಇದು ಜೀವನದ ವಿಭಿನ್ನ ಹಂತಗಳನ್ನು ಅರಿಯುವ ಒಂದು ಘಟ್ಟ, ವೈಯಕ್ತಿಕ ಜೀವನದ ಸವಾಲುಗಳು ಮತ್ತು ಸೋಲುಗಳ ಬಗ್ಗೆ ಅರಿಯುವ ಪ್ರಾಯೋಗಿಕ ಕಲಿಕೆ ಎಂದರು. ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥರಾದ ಪ್ರೊ. ಪರಶುರಾಮ್ ಕೆಜಿ ರವರು ಪ್ರಾಸ್ತಾವಿಕ ನುಡಿಗಳನಾಡುತ್ತಾ ಸಮಾಜ ಕಾರ್ಯ ಶಿಬಿರದ ಮಹತ್ವ ವನ್ನು ತಿಳಿಸಿದರು. ಮುಂಡಗೋಡ ತಾಲುಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಮಾ ಜಿ ಅವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಪ್ರಶಿಕ್ಷಣಾರ್ಥಿಗಳ ಜೀವನದ ಆಯ್ಕೆಯ ಬಗ್ಗೆ ಹಿತವಚನಗಳನ್ನು ನೀಡಿದರು. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಮಹಾ ರೆಡ್ಡಿ ಆಡಳಿತ ಅಧಿಕಾರಿಗಳು ನಾಗನೂರು ಗ್ರಾಮ ಪಂಚಾಯಿತಿ, ಶಂಭು ಆರ್ ಶಿಗ್ನೆಳ್ಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನಾಗನೂರು ಪಂಚಾಯಿತಿ, ಪರಶುರಾಮ ಕೆಜಿ ಅಧ್ಯಕ್ಷರು ಸಮಾಜಕಾರ್ಯ ವಿಭಾಗ ಗೀತಾ, ಶಿವರಾಮ ಭಟ್ಟ, ಸ್ಕೋಡ್ ವೇಸ್ ಸಂಸ್ಥೆಯ ಅಧಿಕಾರಿಗಳಾದ ಪ್ರಶಾಂತ್, ಶಿಬಿರ ಅಧಿಕಾರಿಗಳಾದ, ಟೀನ ಜೋಸ್, ಡೈಸನ್ ಪಿಟಿ, ಸಹ ಶಿಬಿರಾಧಿಕಾರಿಗಳಾದ ಶೇಖರಯ್ಯ, ಶ್ರೀನಿವಾಸ್, ಪ್ರಶಿಕ್ಷಣಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 