ಜು. 14 ರಂದು ಮೌನ ಅನುಷ್ಠಾನ ಮಂಗಲ ಸಮಾರಂಭ
Silent Implementation Mangala Ceremony on July 14th
ಯರಗಟ್ಟಿ 13 : ಸಮೀಪದ ಕೋ-ಶಿವಾಪೂರ ಗ್ರಾಮದ ಶಾಖಾ ಹಿರೇಮಠದ ನೂತನ ಮಠಾಧ್ಯಕ್ಷರಾದ ಪೂಜ್ಯ ಜಡೆತಲೆ ಮರುಳಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳ ಮೌನ ಅನುಷ್ಠಾನ ಮಂಗಲ ಸಮಾರಂಭವು ಜರುಗಲಿದೆ.
ಶುಕ್ರವಾರ ಮೇ. 23 ರಿಂದ ಅನುಷ್ಠಾನಕ್ಕೆ ಕುಳಿತಿದ್ದು ಶನಿವಾರ ಜು. 14 ರಂದು ಮುಕ್ತಾಯಗೊಳ್ಳಲಿದೆ. ಅದರ ನಿಮಿತ್ಯ ಮೌನ ಅನುಷ್ಠಾನ ಮಂಗಲ ಸಮಾರಂಭವು ಧರ್ಮ ಸಭೆಯು ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಹಿರೇಮಠ ಭಾಗೋಜಿಕೊಪ್ಪದ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸೋಮಶೇಖರಮಠ ಮುನವಳ್ಳಿಯ ಮುರಘೇಂದ್ರ ಮಹಾಸ್ವಾಮಿಗಳು, ಹಿರೇಮಠ ಹಣ್ಣಿಕೇರಿಯ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಜಡಿಮಠ ಮೊರಬದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಪರಟ್ಟಿ-ಕಳ್ಳಿಗುದ್ದಿಯ ಬಸವರಾಜ ಮಹಸ್ವಾಮಿಗಳು, ರಾಜರಾಜೇಶ್ವರಿ ಆಶ್ರಮ ಯರಗಟ್ಟಿಯ ಗಣಪತಿ ಮಹಾರಾಜರು ದಿವ್ಯ ಸಾನಿದ್ಯವನ್ನು ವಹಿಸಿದರು. ಸಂಗೀತ ಸೇವೆಯು ಶ್ರೀ ಬಾಬುರಾವ ಬಡಿಗೇರ ಹಾಗೂ ಶ್ರೀ ದಿನೇಶ ಜುಗಳಿ ಇವರಿಂದ ಶನಿವಾರದಂದ್ದು ಶ್ರೀಗಳ ಮೌನ ಅನಿಷ್ಠಾನ ಮಂಗಲ ಸಮಾರಂಭವು ನಡೆಯಲಿದೆ.
ಶಿವಾಪೂರ,ಕೋಟೂರ,ಕಡಬಿ,ಗೊರಗುದ್ದಿ,ಬೋಳಕಡಬಿ,ದೇವರಕಡಬಿ,ಯರಝರ್ವಿ,ನುಗ್ಗಾನಟ್ಟಿ,ಬೂದಿಗೊಪ್ಪ, ಮಾಡಮಗೇರಿ,ಯರಗಣವಿ,ಕುರುಬಗಟ್ಟಿ,ತಾವಲಗೇರಿ,ಕೊಡ್ಲಿವಾಡ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿರೇಮಠದ ಸಮಸ್ತ ಸದ್ಭಕ್ತರು ಹಾಗೂ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 