ಪಟ್ಟಣದ ಶಾಲೆಯಲ್ಲಿ ಕೊಠಡಿ, ಶಿಕ್ಷಕರ ಕೊರತೆ

ಪಟ್ಟಣದ ಶಾಲೆಯಲ್ಲಿ ಕೊಠಡಿ, ಶಿಕ್ಷಕರ ಕೊರತೆ Shortage of rooms and teachers in the town school

ಲೋಕದರ್ಶನ ವರದಿ 

ಹೂವಿನಹಡಗಲಿ  15:  ಪಟ್ಟಣದ 10ನೇ ವಾರ್ಡ್ನಲ್ಲಿ ಇರುವ ಮಿನಿ ವಿಧಾನಸೌಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, 7 ಕೊಠಡಿಗಳಲ್ಲಿ 5  ಸೋರುತ್ತವೆ. ಉಳಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಯಲಲ್ಲಿ ಪಾಠ ಮಾಡಬೇಕಾಗಿದೆ. 8 ಶಿಕ್ಷಕರು ಇದ್ದು, ಇನ್ನೂ 4 ಜನ ಶಕ್ತಿ ಶಿಕ್ಷಕರ ಕೊರತೆ ಇದ್ದು,  ಒಬ್ಬರು ಅತಿಥಿ ಶಿಕ್ಷಕರು. 7ನೇ ತರಗತಿ ನಂತರ 8ನೇ ತರಗತಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಲು ಅದಕ್ಕೂ ಅವಕಾಶ ಇಲ್ಲ. ಇದು ಪಟ್ಟಣದ ಏಕೈಕ ಸರ್ಕಾರಿ ದ್ವಿಭಾಷಾ ಕಲಿಕಾ ಶಾಲೆಯ ಸ್ಥಿತಿ.2019  ರಿಂದ ಈ ಶಾಲೆಯಲ್ಲಿ ಎಲ್ಕೆಜಿ ಯಿಂದ 7ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ತೆರೆಯಲಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ದಾಖಲಾತಿ ಹೆಚ್ಚು ಇದ್ದರೂ , ಆಟದ ಮೈದಾನ ಹಾಗೂ ಮೂಲಸೌಕರ್ಯದ ಕೊರತೆಯಿದೆ.1991ರಲ್ಲಿ ಮಂಜೂರಾಗಿದ್ದ ಈ ಶಾಲೆಯನ್ನು ಟಿಡಿವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾ  ಆರಂಭ ವಾಗಿತ್ತು.ಮಿನಿ ವಿಧಾನಸೌಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳು ಕೊರತೆ, ಆಟದ ಮೈದಾನ ಇಲ್ಲದೇ ಮತ್ತು ಇಂಗ್ಲಿಷ್ ನುರಿತ ಶಿಕ್ಷಕರ ನೇಮಕಾತಿ ಆಗಿಲ್ಲ. ಕಟ್ಟಡಗಳು ದುರಸ್ತಿಯಾಗಿಲ್ಲ. ಅಡುಗೆ ಕೋಣೆ ಶಿಥಿಲ ಗೊಂಡಿದ್ದು, ಕುಸಿಯುವ ಸ್ಥಿತಿಯಲ್ಲಿದೆ. ಆಹಾರ ದಿನಸಿ ಸಂರಕ್ಷಿಸಿ ಕೊಳ್ಳಲು ಸಿಬ್ಬಂದಿ ಪರದಾಡು ವಂತಾಗಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ’ ಎಂದು ಪೋಷಕರು ಆರೋಪಿಸುತ್ತಾರೆ.