ಸಂಬರಗಿ 15: ಶಿರೂರ ಗ್ರಾಮದ ಮಹಾಲಕ್ಷೀ ದೇವಿಯ ಜಾತ್ರಾ ನಿಮಿತ್ಯವಾಗಿ ಜಡೆದ ಕುಸ್ತಿ ಪಂದ್ಯಾಟದಲ್ಲಿ ಸಾಂಗಲಿ ಪೈಲ್ವಾನ್ ಆದ ಬಾಳು ಕಾಂಬಳೆ ಹಾಗೂ ಕೊಳಗಿರಿ ಗ್ರಾಮದ ವಿಜಯ ಕೊಳೆಕರ ಇವರ ನಡುವೆ ಕುಸ್ತಿ ಪಂದ್ಯಾಟದಲ್ಲಿ ಗ್ರಾಮೀಣ ಪ್ರದೇಶದ ಪೈಲ್ವಾನ್‌ರಾದ ವಿಜಯ ಕೊಳೆಕರ ಈ ಕುಸ್ತಿಯಲ್ಲಿ ಗೆದ್ದು ಪ್ರಥಮ ಬಹುಮಾನ ಸ್ವೀಕರಿಸಿದರು.
ಪ್ರತಿ ವರ್ಷದಂತೆ ಈ ವರ್ಷವು ಮಹಾಲಕ್ಷೀ ಜಾತ್ರೆಯನ್ನು ವಿಜೃಂಭನೆಯಿಂದ ಆಚರಿಸಲಾಯಿತು. ಆದರೆ ಬಿರುಗಾಳಿ, ಮಳೆಯಿಂದ ಜಾತ್ರೆಯಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಪ್ರಮುಖರು ಸೇರಿ ಜಾತ್ರೆಯನ್ನು ಸರಿಯಾಗಿ ಶಾಂತಯುತವಾಗಿ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ಸುಮಿತ ಕಾಂಬಳೆ ಸಾಂಗಲಿ, ಅದಿತ್ಯ ಮೊರೆ ಮಿರಜ, ವಿಶ್ವಜೀತ ಬನಸೋಡೆ ಸಾಂಗಲಿ, ಸುಮಿತ ಬಡಿಗೇರ ಅಬ್ಬಿಹಾಳ, ಹರ್ಷವರ್ಧನ ಖೋತ ಸಲಗರ ಸೇರಿದಂತಹ ಹಲವಾರು ಪೈಲ್ವಾನರು ಕುಸ್ತಿ ಪಂದ್ಯಾಟಗಳು ನಡೆಯಿತು.
ಜಾತ್ರೆಯನ್ನು ಶಾಂತವಾಗಿ ನಡೆಸಲು ಗ್ರಾಮ ಪಂಚಾಯತ ಅಧ್ಯಕ್ಷರು ಬಾಳು ಹಜಾರೆ, ಸದಸ್ಯರಾದ ರಘುನಾಥ ಹಜಾರೆ, ಬೀರು ಹಜಾರೆ, ಕಾಕಾ ಪಾಟೀಲ, ಎಸ್.ಎಲ್ ಪಾಟೀಲ, ಬಾಹುಸಾಬ ಕೋಳೆಕರ, ದಾದಾಸಾಹೇಬ ಜಾಂಬರೆ ಸೇರಿಂದತೆ ಗ್ರಾಮದ ಎಲ್ಲಾ ಮುಖಂಡರು ಉಪಸ್ಥಿತ ಇದ್ದರು.
ಶಿರೂರ ಗ್ರಾಮದಲ್ಲಿ ನೂರಾರು ವರ್ಷದಿಂದ ಗ್ರಾಮದಲ್ಲಿ ಹಲವಾರು ಪೈಲ್ವಾನರು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ. ಆದರೆ ಗ್ರಾಮದಲ್ಲಿ ಗರಡಿ ಮನೆ ಇಲ್ಲ. ಇದ್ದಿರುವ ಗರಡಿ ಮನೆ ಹಾಳಾಗಿ ಹೋಗಿದೆ. ಚಿಕ್ಕ ಮಕ್ಕಳು ಕುಸ್ತಿ ಕಲಿಯಲು ಅಗ್ರಾಣಿ ನದಿಯಲ್ಲಿ ಇರುವ ಮರಳಿನಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ನಾನು ವಯಸ್ಸು 18 ರಿಂದ 45 ದಾಟಿದರೂ ಸಹ ಇನ್ನೂ ಕುಸ್ತಿ ಆಡಿ ಗ್ರಾಮಕ್ಕೆ ಕೀರ್ತಿ ತಂದಿದ್ದೇನೆ. ಕರ್ನಾಟಕ ಸರ್ಕಾರ ಕುಸ್ತಿ ಪಟುಗಳಿಗೆ ವಯಸ್ಸು 50 ಆದ ನಂತರ ಕನಿಷ್ಠವಾಗಿ 10 ಸಾವಿರ ರೂಪಾಯಿ ಗೌರವ ಧನ ನೀಡಬೇಕೆಂದು ಪೈಲ್ವಾನ ಬಾಹುಸಾಹೇಬ ಕೋಳೆಕರ ಸರ್ಕಾರಕ್ಕೆ ವಿನಂತಿಸಿದ್ದಾರೆ.