ಅಪ್ರೆಂಟಿಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ

Campus interview for apprenticeship training

ತಾಳಿಕೋಟಿ 05: ಶ್ರೀ ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುವ ಶ್ರೀ ನಿಂಗಪ್ಪ ಎನ್‌. ಬೋಳಶೆಟ್ಟಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಟಯೋಟಾ, ಕಿರ್ಲೋಸ್ಕರ್ ಮೋಟರ್ಸ್‌ ಪ್ರೈವೇಟ್ ಲಿಮಿಟೆಡ್ ಇವರು ದಿನಾಂಕ 17-5-2025 ಶನಿವಾರದಂದು ಬೆಳಿಗ್ಗೆ 8.30 ರಿಂದ ನೇರ ಸಂದರ್ಶನಕ್ಕೆ ಆಗಮಿಸಲಿದ್ದು ಎಲೆಕ್ಟ್ರಿಷಿಯನ್, ಫಿಟರ್, ಟರ್ನರ್ ಮತ್ತು ವೆಲ್ಡರ್ ವೃತ್ತಿಗಳಲ್ಲಿ ತೇರ್ಗಡೆಯಾಗಿರುವ ಮತ್ತು ಅಂತಿಮ ಪರೀಕ್ಷೆಗೆ ಹಾಜರಾಗುತ್ತಿರುವ ತರಬೇತಿದಾರರು ಅಪ್ರೆಂಟಿಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.  

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆ ಪ್ರಾಚಾರ್ಯರನ್ನು ಮೊಬೈಲ್ ಸಂಖ್ಯೆ 8095951474 ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ. ಈ ಕ್ಯಾಂಪಸ್ ಸಂದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತರಬೇತುದಾರರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.