ಐ.ಪಿ.ಎಲ್ ಬೆಟ್ಟಿಂಗ್ ಕಟ್ಟುನಿಟ್ಟಾಗಿ ನಿಯಂತ್ರಿಸಿ: ಜಿಲ್ಲಾಧಿಕಾರಿ
ಕಾರವಾರ 15 : ಜಿಲ್ಲೆಯಲ್ಲ್ಲಿ ಐ.ಪಿ.ಎಲ್ ಬೆಟ್ಟಿಂಗ್, ಅನಧಿಕೃತ ಲಾಟರಿ/ಮಟ್ಕಾ ಹಾವಳಿಯ ಪ್ರಕರಣಗಳು ನಡೆಯದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿ ನಿಯಂತ್ರಣ ಪ್ಲೈಯಿಂಗ್ ಸ್ಕಾ-್ವಡ್‌ನ 2024-25 ನೇ ಸಾಲಿನ ನಾಲ್ಕನೆಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತ ತ್ರೈಮಾಸಿಕದಲ್ಲಿ ಒಟ್ಟು 31 ಮಟ್ಕಾ ಪ್ರಕರಣಗಳಲ್ಲಿ 86 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿರುವ ಬಗ್ಗೆ ಹಾಗೂ ಯಾವುದೇ ಅನಧಿಕೃತ ಲಾಟರಿ ಹಾವಳಿ ಪ್ರಕರಣಗಳು ದಾಖಲಾಗದೇ ಇರುವ ಬಗ್ಗೆ ಮಾಹಿತಿ ಪಡೆದು, ಜಿಲ್ಲೆಯನ್ನು ಸಂಪೂರ್ಣ ಅನಧಿಕೃತ ಲಾಟರಿ/ಮಟ್ಕಾ ಹಾವಳಿ ಮುಕ್ತ ವಲಯವನ್ನಾಗಿ ಮಾಡಲು ಪ್ಲೈಯಿಂಗ್ ಸ್ಕಾ-್ವಡ್‌ನ ಸದಸ್ಯರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಪೋಲಿಸ್ ನೀರೀಕ್ಷಕರಾದ ನಿತ್ಯಾನಂದ ಪಂಡಿತ್, ವಾಣಿಜ್ಯ ತೆರಿಗೆ ಅಧಿಕಾರಿ ಷಣ್ಮುಗಪ್ಪ ನರೇಗಲ್, ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಪಟಗಾರ, ಅಭಿವೃದ್ಧಿ ಅಧಿಕಾರಿ ಕಾಶಿಮಸಾಬ ಮುಲ್ಲಾ, ಶೋಲಿನ್ ಡಿ’ಕೋಸ್ಟಾ, ಮತ್ತಿತರರು ಉಪಸ್ಥಿತರಿದ್ಧರು.