ವಿಭಾ ಸಾಹಿತ್ಯ ಪ್ರಶಸ್ತಿಗೆ ಶೇಕ್ರಾ ನಾಯ್ಕ್ ಆಯ್ಕೆ
Shekra Naik selected for Vibha Literary Award
ಕಾರವಾರ 26 : 2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಶೇಕ್ರಾ ನಾಯ್ಕ್ ಅವರ ‘ಹೊಸಿಲು ಸವರಿದ ಸರಗು’ ಕವನ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ. ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂ ಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀಪುಗಾರರಾಗಿದ್ದರು.
ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷಾಶೈಲಿ ಹಾಗೂ ಭಾವಸಮೃದ್ಧಿಯನ್ನು ಪರಿಚಯಿಸುವ ಕೃತಿಯಾಗಿ ‘ಹೊಸಿಲು ಸವರಿದ ಸರಗು’ ಆಯ್ಕೆಯಾಗಿದೆ ಎಂದು ತೀಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಪ್ರಶಸ್ತಿಯು ?10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ವಿಭಾ ಸಾಹಿತ್ಯ ಪ್ರಶಸ್ತಿಯ ಸಂಚಾಲಕಿ ಸುನಂದಾ ಕಡಮೆ ತಿಳಿಸಿದ್ದಾರೆ.
ಕವಿ ಪರಿಚಯ : 1985ರಲ್ಲಿ ಜನಿಸಿದ ಶೇಕ್ರಾ ನಾಯ್ಕ್ ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರು. ಎಂ.ಎ. ಇತಿಹಾಸ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪದವಿ ಪಡೆದಿರುವ ಅವರು ಗಂಗಾವತಿ ತಾಲ್ಲೂಕಿನ ಚಳ್ಳೂರು ಕ್ಯಾಂಪ್ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಯುವಜನ, ಮಹಿಳಾ ಹಾಗೂ ರೈತ-ಕಾರ್ಮಿಕರ ಚಳವಳಿಗಳಲ್ಲಿ ಭಾಗಿಯಾಗುತ್ತ ಬಂದಿರುವ ಅವರು ಕವಿತೆ, ಕಥೆ, ಪ್ರಬಂಧ ಹಾಗೂ ಕಾದಂಬರಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಶಿಕ್ಷಕರತ್ನ’, ‘ಉತ್ತಮ ಶಿಕ್ಷಕ’, ‘ವಿಜ್ಞಾನ ಪರಿಚಾಲಕ’, ‘ಪವಾಡ ರಹಸ್ಯ ತಜ್ಞ’ ಸೇರಿದಂತೆ ವಿವಿಧ ಸಂಘಟನೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 