ಶಾಲಾ ಮಕ್ಕಳಿಂದ ವಿವಿಧ ಗಿಡ-ಮರಗಳ ವೇಷಭೂಷಣ ಧರಿಸಿ ಪರಿಸರ ಜಾಗೃತಿ ಜಾಥಾ

ಶಾಲಾ ಮಕ್ಕಳಿಂದ ವಿವಿಧ ಗಿಡ-ಮರಗಳ ವೇಷಭೂಷಣ ಧರಿಸಿ ಪರಿಸರ ಜಾಗೃತಿ ಜಾಥಾ School children dressed up as various plants and trees in an environmental awareness march

ಲೋಕದರ್ಶನ ವರದಿ 

ಯರಗಟ್ಟಿ 06 : ಪಟ್ಟಣದ ಕರ್ನಾಟಕ ಕನ್ನಡ ಪ್ರಾಥಮಿಕ ಶಾಲಾ ಮಕ್ಕಳು ವಿವಿಧ ಗಿಡ-ಮರಗಳ ವೇಷಭೂಷಣ ಧರಿಸಿ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಪರಿಸರ ರಕ್ಷಣೆ ಜಾಗೃತಿ ಮೂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎ. ಖಾಜಿ ಪರಿಸರ ಜಾಗೃತಿ ಜಾಥಾಗೆ ಚಾಲನೀಡಿದರು. ಈ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಮಾಜಿ ಪ. ಪಂ. ಸದಸ್ಯ ವಿಶಾಲಗೌಡ ಪಾಟೀಲ,  ಕೆ. ಬಿ. ಬೆಣ್ಣೆ, ನಾಗರಾಜ ಚವಡಪ್ಪನವರ, ರಾಜು ಹಿರೇಮಠ, ಶಾಲಾ ಮುಖ್ಯ ಶಿಕ್ಷಕ ವಿರೂಪಾಕ್ಷ ಹಾದಿಮನಿ, ಶಿಕ್ಷಕಿಯರಾದ ರಾಜೇಶ್ವರಿ ಬಡಿಗೇರ, ಎಸ್‌. ಬಿ. ತೋರಗಲ್ಲ, ಎಂ. ಪಿ. ವಿರಕ್ತಮಠ, ಪಲ್ಲವಿ ಕಳಸಿ, ಕುಸುಮಾ ಪಟ್ಟಣಶೆಟ್ಟಿ, ಕೆ. ಜಿ. ಸವದತ್ತಿ ಹಾಗೂ ಸಿಬ್ಬಂದಿ ಇದ್ದರು.